ಬೆಂಗಳೂರು: ನಟ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಮ್ಯಾನ್ ಹಾಲ್ ಗೆ ಬಿದ್ದಿದ್ದಾರೆ. ಅವರನ್ನು ಎತ್ತಲು ಸಾಕಷ್ಟು ಜನ ಸುತ್ತಲೂ ನೆರೆದಿದ್ದಾರೆ. ಇಂತಹದ್ದೊಂದು ವಿಡಿಯೋವನ್ನು ರಮೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಅಷ್ಟಕ್ಕೇ ಗಾಬರಿಯಾಗಬೇಕಿಲ್ಲ. ಇದೆಲ್ಲಾ ನಡೆದಿರುವುದು ಶೂಟಿಂಗ್ ಗಾಗಿ. ನಟ ರಮೇಶ್ ಅರವಿಂದ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಯುವರ್ಸ್ ಸಿನ್ಸಿಯರ್ಲೀ ರಾಮ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ವಿಖ್ಯಾತ್ ಈ ಸಿನಿಮಾದ ನಿರ್ದೇಶಕರು.
ಈ ಸಿನಿಮಾ ಶೂಟಿಂಗ್ ಗಾಗಿ ಇಬ್ಬರನ್ನೂ ಮ್ಯಾನ್ ಹೋಲ್ ಒಳಗೆ ಇಳಿಸಲಾಗಿದೆ. ರಮೇಶ್ ಅರವಿಂದ್ ಸೂಟು ಬೂಟು ಹಾಕಿಕೊಂಡಿದ್ದರೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಸ್ಟೈಲಿಶ್ ಶರ್ಟ್ ನಲ್ಲಿದ್ದಾರೆ. ಇಬ್ಬರೂ ಒಂದೇ ಮ್ಯಾನ್ ಹೋಲ್ ನಲ್ಲಿ ನಿಂತಿರುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ನಟರ ಕಾಲೆಳೆದಿದ್ದಾರೆ. ಒಬ್ಬರು ಮುಂಗಾರು ಮಳೆ ಟೈಮ್ ನಲ್ಲಿ ನಾಯಕ ಪ್ರೀತಂ ವಾಚ್ ಬಿದ್ದಿತ್ತಲ್ಲ, ಅದನ್ನು ಹುಡುಕಲು ಇಳಿದಿರಬೇಕು ಎಂದು ಗಣೇಶ್ ಕಾಲೆಳೆದಿದ್ದಾರೆ. ಇನ್ನೊಬ್ಬರು ಅಲ್ಲೇನು ಮಾಡ್ತಿದ್ದೀರಿ ರಮೇಶ್ ಸರ್ ಎಂದು ತಮಾಷೆ ಮಾಡಿದ್ದಾರೆ.