ಬೆಂಗಳೂರು: ಊರೆಲ್ಲಾ ಸುತ್ತಿ ಪುಷ್ಪ 2 ಸಿನಿಮಾ ಪ್ರಚಾರ ಮಾಡಿದ್ದ ನಾಯಕ ಅಲ್ಲು ಅರ್ಜುನ್ ಮತ್ತು ನಾಯಕಿ ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಮಾತ್ರ ಬರಲೇ ಇಲ್ಲ. ಇದಕ್ಕೆ ವಿತರಕ ಲಕ್ಷ್ಮೀಕಾಂತ್ ಸಮಜಾಯಿಷಿ ನೀಡಿದ್ದಾರೆ.
ಹೈದರಾಬಾದ್ ಅಲ್ಲದೆ, ಕೇರಳ, ತಮಿಳುನಾಡು, ಮುಂಬೈಗೆ ಹೋಗಿ ದೊಡ್ಡ ಈವೆಂಟ್ ಮಾಡಿ ಪುಷ್ಪ 2 ಸಿನಿಮಾ ಪ್ರಮೋಷನ್ ಮಾಡಲಾಗಿತ್ತು. ಈ ಪ್ರಮೋಷನ್ ಗೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹೋಗಿ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ಇವರು ಕರ್ನಾಟಕಕ್ಕೆ ತಪ್ಪಿಯೂ ಕಾಲಿಟ್ಟಿಲ್ಲ.
ಕಳೆದ ಬಾರಿ ಪುಷ್ಪ 1 ಸಿನಿಮಾ ಪ್ರಚಾರಕ್ಕಾಗಿ ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದಿದ್ದರು. ಆಗ ಅವರು ತಡವಾಗಿ ಪತ್ರಿಕಾಗೋಷ್ಠಿಗೆ ಬಂದಿದ್ದಕ್ಕೆ ಪತ್ರಕರ್ತರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಹುಶಃ ಇದೇ ಅವಮಾನದ ಕಾರಣಕ್ಕೆ ಅಲ್ಲು ಅರ್ಜುನ್ ಬೆಂಗಳೂರನ್ನು ಕಡೆಗಣಿಸಿದರೇನೋ ಎಂಬ ಅನುಮಾನವಿದೆ.
ಆದರೆ ವಿತರಕ ಲಕ್ಷ್ಮೀಕಾಂತ್ ಇದಕ್ಕೆ ಮಳೆಯ ಕಾರಣವನ್ನು ನೀಡಿದ್ದಾರೆ. ಮಳೆಯಿಂದಾಗಿ ಅಲ್ಲು ಅರ್ಜುನ್ ಬೆಂಗಳೂರಿಗೆ ಬರಲಾಗಲಿಲ್ಲ. ಆದರೆ ಮುಂದೆ ಪುಷ್ಪ 2 ಸಕ್ಸಸ್ ಮೀಟ್ ಒಂದನ್ನು ಬೆಂಗಳೂರಿನಲ್ಲೇ ಆಯೋಜಿಸುತ್ತೇವೆ. ಅದಕ್ಕೆ ಅಲ್ಲಲು ಅರ್ಜುನ್ ಸಹಿತ ಚಿತ್ರತಂಡವನ್ನೇ ಕರೆಸುವುದಾಗಿ ಭರವಸೆ ನೀಡಿದ್ದಾರೆ. ವಿಪರ್ಯಾಸವೆಂದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ರಶ್ಮಿಕಾ, ಐಟಂ ಸಾಂಗ್ ಮಾಡಿರುವ ಶ್ರೀಲೀಲಾ ಮೂಲತಃ ಕನ್ನಡಿಗರೇ. ಇನ್ನು, ಪುಷ್ಪ 2 ಸಿನಿಮಾಗೆ ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆಯೂ ಇದೆ. ಹಾಗಿದ್ದರೂ ಅಲ್ಲು ಅರ್ಜುನ್ ಕರ್ನಾಟಕವನ್ನು ಕಡೆಗಣಿಸಿರುವುದು ವಿಪರ್ಯಾಸದ ಸಂಗತಿ.