Publish Date: Fri, 11 Dec 2020 (08:44 IST)
Updated Date: Fri, 11 Dec 2020 (08:46 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಹೊಸ ಸಿನಿಮಾವೊಂದು ಬಿಡುಗಡೆಯಾಗಲಿದೆ. ಪುರುಸೊತ್ ರಾಮಣ್ಣ ಎಂಬ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.
ರವಿಶಂಕರ್ ಗೌಡ, ಶಿವರಾಜ್ ಕೆ ಆರ್ ಪೇಟೆ, ಕುರಿ ಪ್ರತಾಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಪುರುಸೊತ್ ರಾಮಣ್ಣ. ಪಕ್ಕಾ ಕಾಮಿಡಿ ಎಂಟರ್ ಟೈನರ್ ಸಿನಿಮಾ ಇದಾಗಲಿದ್ದು, ವೀಕ್ಷಕರಿಗೆ ಮನರಂಜನೆ ಒದಗಿಸುವುದು ಪಕ್ಕಾ. ಲಾಕ್ ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೂರನೇ ಸಿನಿಮಾವಿದು.