Publish Date: Wed, 09 Dec 2020 (11:44 IST)
Updated Date: Wed, 09 Dec 2020 (11:45 IST)
ಬೆಂಗಳೂರು: ಯೋಗರಾಜ್ ಭಟ್-ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಗಾಳಿಪಟ 2 ಸಿನಿಮಾದ ಕೆಲವು ಭಾಗದ ಚಿತ್ರೀಕರಣ ಇನ್ನೂ ಬಾಕಿಯಿದೆ.
ಲಾಕ್ ಡೌನ್ ಬಳಿಕ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಿದ್ದ ಚಿತ್ರತಂಡ ಇದೀಗ ಮುಂದಿನ ವರ್ಷಕ್ಕೆ ಚಿತ್ರೀಕರಣ ಮುಂದೂಡಿದೆ. ಮೂಲಗಳ ಪ್ರಕಾರ ಚಿತ್ರತಂಡ ವಿದೇಶದಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿದೆ. ಕೊರೋನಾಗಿಂತ ಮೊದಲೇ ಭಟ್ಟರು ಹಾಡಿನ ಚಿತ್ರೀಕರಣವೊಂದನ್ನು ವಿದೇಶದಲ್ಲಿ ನಡೆಸಲು ಯೋಜನೆ ರೂಪಿಸಿದ್ದರು. ಆದರೆ ಕೊರೋನಾದಿಂದಾಗಿ ಯೋಜನೆ ಅರ್ಧಕ್ಕೇ ಬಾಕಿಯಾಗಿತ್ತು.