Publish Date: Wed, 16 Mar 2022 (09:50 IST)
Updated Date: Wed, 16 Mar 2022 (09:58 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು, ಈ ಟೈಟಲ್ ಹಿಂದಿನ ಕತೆಯನ್ನು ನಟ ಡಾರ್ಲಿಂಗ್ ಕೃಷ್ಣ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಜೇಮ್ಸ್ ಎಂಬ ಟೈಟಲ್ ಮೊದಲು ನನ್ನದಾಗಿತ್ತು. ನಾನು ನನ್ನ ನಿರ್ಮಾಣ ಸಂಸ್ಥೆಯಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದೆ ಎಂಬ ಕುತೂಹಲಕಾರೀ ವಿಚಾರವನ್ನು ಕೃಷ್ಣ ಬಹಿರಂಗಪಡಿಸಿದ್ದಾರೆ.
ಈ ಸಿನಿಮಾ ಟೈಟಲ್ ನಾನು ಮತ್ತು ಚೇತನ್ (ಜೇಮ್ಸ್ ನಿರ್ದೇಶಕ) ರಿಜಿಸ್ಟರ್ ಮಾಡಿಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಒಂದು ದಿನ ಚೇತನ್ ಫೋನ್ ಮಾಡಿ ನನಗೆ ಅಪ್ಪು ಸರ್ ಡೇಟ್ ಸಿಕ್ಕಿದೆ. ಜೇಮ್ಸ್ ಟೈಟಲ್ ನಲ್ಲಿ ಅವರಿಗೆ ಸಿನಿಮಾ ಮಾಡ್ತೀನಿ ಎಂದರು. ನಾನು ತಕ್ಷಣವೇ ಓಕೆ ಎಂದು ನನ್ನ ಸಂಸ್ಥೆ ಹೆಸರಿನಲ್ಲಿ ರಿಜಿಸ್ಟರ್ ಆಗಿದ್ದ ಟೈಟಲ್ ನ್ನು ಚೇತನ್ ಗೆ ನೀಡಿದೆ. ಅಪ್ಪು ಸರ್ ಯಾವುದೇ ಸಿನಿಮಾವಾದರೂ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಜೇಮ್ಸ್ ಕೂಡಾ ಮಿಸ್ ಮಾಡಲ್ಲ ಎಂದಿದ್ದಾರೆ ಕೃಷ್ಣ.