Select Your Language

Notifications

webdunia
webdunia
webdunia
webdunia

ಪುನೀತ್ ರಾಜ್ ಕುಮಾರ್ ಕುರಿತ ಪುಸ್ತಕ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಪುನೀತ್ ರಾಜ್ ಕುಮಾರ್ ಕುರಿತ ಪುಸ್ತಕ ಬಿಡುಗಡೆ ಮಾಡಿದ ಕಿಚ್ಚ ಸುದೀಪ್
ಬೆಂಗಳೂರು , ಮಂಗಳವಾರ, 15 ಮಾರ್ಚ್ 2022 (17:16 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಜೀವನ ಕುರಿತಾದ ‘ನೀನೇ ರಾಜಕುಮಾರ’ ಪುಸ್ತಕವನ್ನು ಕಿಚ್ಚ ಸುದೀಪ್ ಲೋಕಾರ್ಪಣೆಗೊಳಿಸಿದ್ದಾರೆ.

ಡಾ. ಶರಣು ಹುಲ್ಲೂರು ಬರೆದಿರುವ ಈ ಪುಸ್ತಕದಲ್ಲಿ ಪುನೀತ್ ರಾಜ್ ಕುಮಾರ್ ಜೀವನದ ಕುರಿತು ಸೊಗಸಾಗಿ ಬರೆಯಲಾಗಿದೆ. ಈ ಪುಸ್ತಕವನ್ನು ಬಿಡುಗಡೆ ಮಾಡಿ ಕಿಚ್ಚ ಸುದೀಪ್ ಸ್ನೇಹಿತ ಪುನೀತ್ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ.

ಒಂದೊಳ್ಳೆ ಕೃತಿ ಮೂಲಕ ಡಾ. ಶರಣು ಹುಲ್ಲೂರು ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಯಾವತ್ತಿಗೂ ಪುನೀತ್ ಅವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಸುದೀಪ್ ಭಾವುಕರಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆಝೋನ್ ಪ್ರೈಮ್ ಗೆ ಬಂತು ಲವ್ ಮಾಕ್ಟೇಲ್ 2: ಪ್ರಸಾರ ಸಮಯ ಮಾಹಿತಿ ಇಲ್ಲಿದೆ