Select Your Language

Notifications

webdunia
webdunia
webdunia
webdunia

ಟಿಕೆಟ್ ಇಲ್ಲದೆ ಪ್ರಯಾಣ ಲಕ್ಷ ಲಕ್ಷ ದಂಡ ಸಂಗ್ರಹಣೆ

Puneet rajkumar
ಬೆಂಗಳೂರು , ಮಂಗಳವಾರ, 15 ಮಾರ್ಚ್ 2022 (15:39 IST)
ಟಿಕೇಟ್ ಪಡೆಯದೆ ಅನಧಿಕೃತವಾಗಿ ಬಿಎಂಟಿಸಿ ವಾಹನಗಳಲ್ಲಿ ಸಂಚರಿಸುವವರಿಂದ ಸಂಸ್ಥೆಯ ಅದಾಯದ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಗರದಾದ್ಯಂತ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡಿದ ತಂಡಗಳು 2022ರ ಫೆಬ್ರವರಿ ತಿಂಗಳಲ್ಲಿ 3325 ಟಿಕೇಟ್ ರಹಿತ ಪ್ರಯಾಣಿಕರಿಂದ ಒಟ್ಟು 491141 ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1042 ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಅಸನಗಳಲ್ಲಿ ಕುಳಿತು ಪ್ರಯಾಣಿಸಿರುವ 228 ಪುರುಷ ಪ್ರಯಾಣಿಕರಿಂದ ಒಟ್ಟು 22,800 ರೂ , ಮೋಟಾರು ವಾಹನ ಕಾಯ್ದೆ 988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿದೆ.
 
ಒಟ್ಟಾರೆ ಫೆಬ್ರವರಿ 2022ರ ಮಾಹೆಯಲ್ಲಿ 3553 ಪ್ರಯಾಣಿಕರಿಂದ ಒಟ್ಟು ರೂ.5,13,911 ದಂಡ ವಸೂಲಿ ಮಾಡಲಾಗಿದೆ. ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ ದಿನದ /ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸ ಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ಧರಿಸುವಂತಿಲ್ಲ ಹೈಕೋರ್ಟ್ ಆದೇಶ