ಬೆಂಗಳೂರು: ಈ ವಾರ ಕನ್ನಡ ಸಿನಿಮಾಭಿಮಾನಿಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಬ್ಬ. ಪುನೀತ್ ಹುಟ್ಟುಹಬ್ಬದ ಜೊತೆಗೆ ಅವರ ಕೊನೆಯ ಸಿನಿಮಾ ಬಿಡುಗಡೆಯಾಗುತ್ತಿರುವ ಸಂಭ್ರಮ.
ಈಗಾಗಲೇ ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಮೊದಲ ದಿನದ ಟಿಕೆಟ್ ಗಳು ಬಹುತೇಕ ಬಿಕರಿಯಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನವೇ ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳೂ ತೋರುತ್ತಿವೆ.
ಪುನೀತ್ ಕೊನೆಯ ಸಿನಿಮಾ ಎಂಬ ಭಾವುಕತೆಯಲ್ಲಿ ಅಭಿಮಾನಿಗಳು ಈ ಸಿನಿಮಾವನ್ನು ಒಂದು ಹಬ್ಬದ ರೀತಿಯಲ್ಲಿ ಎದಿರುಗೊಳ್ಳುತ್ತಿದ್ದಾರೆ. ಹೀಗಾಗಿ ಪುನೀತ್ ಸಿನಿಮಾಗಳ ಮಟ್ಟಿಗೆ ಈ ಸಿನಿಮಾ ಹೊಸ ದಾಖಲೆಯನ್ನೇ ಬರೆಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.