Publish Date: Wed, 12 Jun 2024 (12:11 IST)
Updated Date: Wed, 12 Jun 2024 (12:14 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಈಗ ಮೂರು ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈಗ ಆ ಸಿನಿಮಾಗಳ ಕತೆಯೇನು ಎಂಬ ಪ್ರಶ್ನೆ ಮೂಡಿದೆ.
ಇತ್ತೀಚೆಗಷ್ಟೇ ಕಾಟೇರ ಸಿನಿಮಾ ಸಕ್ಸಸ್ ಬಳಿಕ ದರ್ಶನ್ ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. ಅದು ದರ್ಶನ್ 57 ನೇ ಸಿನಿಮಾವಾಗಿತ್ತು. ಅದಿನ್ನೂ ಚಿತ್ರೀಕರಣ ಹಂತದಲ್ಲೇ ಇದೆ. ಇದರ ನಡುವೆ ಅವರಿಗೆ ಕೈ ನೋವಾಗಿದ್ದರಿಂದ ಕೆಲವು ದಿನ ಚಿತ್ರೀಕರಣ ಸ್ಥಗಿತಗೊಂಡಿತ್ತು.
ಇದರ ನಡುವೆ ನಿರ್ದೇಶಕ ಪ್ರೇಮ್ ಜೊತೆ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇದಿನ್ನೂ ಆರಂಭವಾಗಿಲ್ಲ. ಪ್ರಿ ಪ್ರೊಡಕ್ಷನ್ ಹಂತದಲ್ಲಿದೆಯಷ್ಟೇ. ಜೋಗಿ ಪ್ರೇಮ್ ಸಿನಿಮಾ ಎಂದರೆ ಅದು ಬೇಗ ಅಂತೂ ಆರಂಭವಾಗಲ್ಲ. ಇದಲ್ಲದೆ ತರುಣ್ ಸುಧೀರ್ ಜೊತೆಗೂ ಒಂದು ಸಿನಿಮಾ ಮಾಡಲಿದ್ದಾರೆ. ಇದರ ಪೋಸ್ಟರ್ ಕೂಡಾ ಅವರ ಬರ್ತ್ ಡೇಗೆ ಬಿಡುಗಡೆಯಾಗಿತ್ತು.
ಇದೀಗ ದರ್ಶನ್ ಅರೆಸ್ಟ್ ಆಗಿರುವುದರಿಂದ ಈ ಮೂರೂ ಬಿಗ್ ಬಜೆಟ್ ಸಿನಿಮಾಗಳ ಕತೆಯೇನು ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ದರ್ಶನ್ ತಪ್ಪಿತಸ್ಥರೆಂದು ಸಾಬೀತಾದರೆ ಸಿನಿಮಾಗಳೆಲ್ಲವೂ ಅರ್ಧಕ್ಕೇ ನಿಲ್ಲಲಿವೆ. ದರ್ಶನ್ ಬಂಧಿತರಾಗಿರುವುದರಿಂದ ಈಗ ಅವರ ಮೇಲೆ ಹಣ ಹೂಡಿರುವ ನಿರ್ಮಾಪಕರು ಕಂಗಾಲಾಗಿದ್ದಾರೆ.