Publish Date: Sun, 02 Oct 2022 (15:50 IST)
Updated Date: Sun, 02 Oct 2022 (15:52 IST)
ಬೆಂಗಳೂರು: ಬೆದರಿಕೆ ಆರೋಪಕ್ಕೊಳಗಾಗಿರುವ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಜಗದೀಶ್ ಪರವಾಗಿ ಈಗ ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿದ್ದಾರೆ.
ಇದಕ್ಕೆ ಮೊದಲು ನಟ ಉಪೇಂದ್ರ, ನೆನಪಿರಲಿ ಪ್ರೇಮ್ ಕೂಡಾ ಸ್ನೇಹಿತ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಸ್ನೇಹಿತ್ ಒಳ್ಳೆಯ ಹುಡುಗ. ತಪ್ಪುಗಳು ಏನೇ ಇದ್ದರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳಿ ಎಂದು ಉಪೇಂದ್ರ ಹೇಳಿದ್ದರು.
ಇದೀಗ ಪ್ರಿಯಾಂಕ ಉಪೇಂದ್ರ ಕೂಡಾ ಸ್ನೇಹಿತ್ ಪರವಾಗಿ ಮಾತನಾಡಿದ್ದು, ಸತ್ಯಾಸತ್ಯತೆ ಅರಿಯದೇ ಮಾಧ್ಯಮಗಳು ಸ್ನೇಹಿತ್ ನನ್ನು ತಪ್ಪು ಎಂಬಂತೆ ಬಿಂಬಿಸುವುದು ಬೇಡ. ನಾವು ಚಿಕ್ಕಂದಿನಿಂದ ಸ್ನೇಹಿತ್ ನನ್ನು ನೋಡುತ್ತಾ ಬಂದಿದ್ದೇವೆ. ಆತ ತುಂಬಾ ಮೃದು, ಸೈಲೆಂಟ್, ಯಾರ ತಂಟೆಗೂ ಹೋಗದ ಹುಡುಗ ಎಂದು ಸ್ನೇಹಿತ್ ಪರವಾಗಿ ಪ್ರಿಯಾಂಕ ಮಾತನಾಡಿದ್ದಾರೆ.
-Edited by Rajesh Patil