Select Your Language

Notifications

webdunia
webdunia
webdunia
webdunia

ಬಯಸಿದಂತೇ ಹೆಣ್ಣು ಮಗುವಿಗೆ ತಂದೆಯಾದ ಧ್ರುವ ಸರ್ಜಾ

ಬಯಸಿದಂತೇ ಹೆಣ್ಣು ಮಗುವಿಗೆ ತಂದೆಯಾದ ಧ್ರುವ ಸರ್ಜಾ
ಬೆಂಗಳೂರು , ಭಾನುವಾರ, 2 ಅಕ್ಟೋಬರ್ 2022 (15:33 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಪತ್ನಿ ಪ್ರೇರಣಾ ಸರ್ಜಾಗೆ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.

ಈ ಹಿಂದೆಯೇ ಧ‍್ರುವ ತಮಗೆ ಅಣ್ಣನ ಮಗ ರಾಯನ್ ಗಂಡು ಮಗು. ಹೀಗಾಗಿ ಈಗ ಹೆಣ್ಣು ಮಗುವಾಗಬೇಕೆಂದೇ ಆಸೆಯಿದೆ ಎಂದಿದ್ದರು. ಅವರ ಆಸೆಯಂತೇ ಹೆಣ್ಣು ಮಗು ಜನನವಾಗಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ಧ್ರುವ ತಿಳಿಸಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಖುಷಿ ಹಂಚಿಕೊಂಡಿರುವ ಧ್ರುವ ಸರ್ಜಾ ‘ಹೆಣ್ಣು ಮಗು ಆಗಬೇಕೆಂದು ನನಗೆ ಆಸೆಯಿತ್ತು. ಅದು ನೆರವೇರಿದೆ. ಮಗಳು ಹುಟ್ಟಿದ ಮೇಲೆ ಹೆಣ್ಣು ಮಕ್ಕಳ ಮೇಲಿನ ಗೌರವ ಇನ್ನೂ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಅಣ‍್ಣ ಚಿರು ಸರ್ಜಾ, ಅಜ್ಜಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಭಾವುಕರಾಗಿ ಹೇಳಿದ್ದಾರೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ರಾಕೇಶ್ ಅಡಿಗ ಮಾಡಿದ ಪ್ರ್ಯಾಂಕ್ ಗೆ ಪ್ರಶಾಂತ್ ಸಂಬರ್ಗಿ ಸಿಟ್ಟು, ಕಣ್ಣೀರು