Select Your Language

Notifications

webdunia
webdunia
webdunia
webdunia

ನ್ಯೂಯಾರ್ಕ್ ಉಗ್ರರ ದಾಳಿಯಲ್ಲಿ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಎಸ್ಕೇಪ್

ನ್ಯೂಯಾರ್ಕ್ ಉಗ್ರರ ದಾಳಿಯಲ್ಲಿ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಎಸ್ಕೇಪ್
ನ್ಯೂಯಾರ್ಕ್ , ಬುಧವಾರ, 1 ನವೆಂಬರ್ 2017 (17:43 IST)
ನ್ಯೂಯಾರ್ಕ್ ನಗರದಲ್ಲಿ ನಡೆದ ಉಗ್ರನ ದಾಳಿ ನನ್ನ ನಿವಾಸದಿಂದ ಕೇವಲ ಐದನೇ ಬ್ಲಾಕ್‌ನಲ್ಲಿ ನಡೆದಿದೆ. ಅದೃಷ್ಟವಶಾತ್ ನಾನು ಉಗ್ರರ ದಾಳಿಯಿಂದ ಪಾರಾಗಿದ್ದೇನೆ ಎಂದು ಬಾಲಿವುಡ್ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದಾರೆ.
ಉಗ್ರನ ದಾಳಿಯ ಕೆಲವೇ ಗಂಟೆಗಳ ಮುಂಚೆ ಮೂರನೇ ಆವೃತ್ತಿಯ ಟಿವಿ ಧಾರವಾಹಿ ಕ್ವಾಂಟಿಕೋದ ಶೂಟಿಂಗ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಪಾಲ್ಗೊಂಡಿದ್ದರು ಎನ್ನಲಾಗಿದೆ. 
 
ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿರುವಾಗ ಪೊಲೀಸ್ ಸೈರನ್‌ಗಳು ಕೂಗಾಟ, ಪೊಲೀಸರು ಜನರನ್ನು ತಡೆಯುತ್ತಿದ್ದು ಉಗ್ರನ ದಾಳಿಯಾಗಿದೆ ಎಂದು ಎಚ್ಚರಿಸುತ್ತಿದ್ದರು.  ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಪ್ರಿಯಾಂಕಾ ಟ್ವಿಟ್ ಮಾಡಿದ್ದಾರೆ. 
 
ನ್ಯೂಯಾರ್ಕ್‌‌ ನ ಲೋವರ್‌ ಮ್ಯಾನ್‌ ಹ್ಯಾಟನ್‌‌ ನ ಉಗ್ರ ಅಟ್ಟಹಾಸ ಮೆರೆದಿದ್ದಾನೆ. ಜನನಿಬಿಡ ಬೈಕ್‌ ಪಾತ್‌ ನಲ್ಲಿ ಪಿಕ್‌ಅಪ್‌ ಟ್ರಕ್‌‌ ನುಗ್ಗಿಸಿದ ಉಗ್ರ 8 ಮಂದಿಯನ್ನು ಹತ್ಯೆಗೈದಿದ್ದಾನೆ.
 
ಮಂಗಳವಾರ ಮಧ್ಯಾಹ್ನ 3:05ರ ಸುಮಾರಿಗೆ 29 ವರ್ಷದ ಉಗ್ರ ಪಿಕ್‌ ಅಪ್‌ ಟ್ರಕ್‌ ‌ಅನ್ನು ರಸ್ತೆ ಮೇಲೆ ಅಡ್ದಾದಿಡ್ಡಿ ನುಗ್ಗಿಸಿದ್ದಾನೆ. ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 12 ಮಂದಿ ಗಾಯಗೊಂಡಿದ್ದಾರೆ.
 
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಉಗ್ರನಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಉಗ್ರ ಅಲ್ಲಾಹು ಅಕ್ಬರ್‌ ಎಂದು ಕೂಗಿದ್ದಾನೆ ಎಂದು ನ್ಯೂಯಾರ್ಕ್‌‌ ಸಿಟಿ ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.
 
ಶಂಕಿತ 29 ವರ್ಷ ವಯಸ್ಸಿನ ಉಗ್ರ ಸೈಫುಲ್ಲೋ ಸೈಪೋವ್ ಉಜ್ಬೇಕಿಸ್ತಾನ್ ಮೂಲದವನಾಗಿದ್ದು, ಬಂಧನಕ್ಕೊಳಗಾಗುವ ಮುಂಚೆ ಆತನೆ ಹೊಟ್ಟೆಗೆ ಗುಂಡು ತಗುಲಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆಟದ ವೇಳೆ ಕೆಳಗೆ ಬಿದ್ದ ಜೆಕೆ: ಇಷ್ಟಕ್ಕೆ ಕಣ್ಣೀರಿಟ್ಟರಾ ಆಶಿತಾ..?