ಬೆಂಗಳೂರು: ಕನ್ನಡದ ರಾಜಕುಮಾರ ಸೇರಿದಂತೆ ಜೇಮ್ಸ್, ಆರೆಂಜ್, ಕರಟಕ ದಮನಕ ಸಿನಿಮಾದಲ್ಲಿ ಅಭಿನಯಿಸಿದ್ದ ಸೌತ್ ಬ್ಯೂಟಿ ಪ್ರಿಯಾ ಆನಂದ್‌ಗೆ ಇದೀಗ ಕನ್ನಡದಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ರಾಜಕುಮಾರ ಸಿನಿಮಾದ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ಪ್ರಿಯಾ ಆನಂದ್‌ಗೆ ಇದೀಗ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಭಿನಯಿಸಲಿದ್ದಾರೆ.
ಈ ಮೂಲಕ ಪ್ರಿಯಾ ಅವರು ಬಲರಾಮನ ಅಡ್ಡಾಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ಬಲರಾಮನ ದಿನಗಳು ಎಂದು ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರದಲ್ಲಿ ಪ್ರಿಯಾ ನಾಯಕಿಯಾಗಿದ್ದು, ಈಗಾಗಲೇ ಚಿತ್ರೀಕರಣ ಶುರುವಾಗಿದೆ.
ಈ ಕುರಿತು ಚಿತ್ರತಂಡ ಕೂಡ ಅಧಿಕೃತವಾಗಿ ತಿಳಿಸಿದೆ. 80ರ ಕಾಲಘಟ್ಟದ ಭೂಗತಲೋಕದ ಹಿನ್ನೆಲೆಯುಳ್ಳ ವಿಭಿನ್ನ ಕಥೆ ಇದಾಗಿದೆ. ಇದಕ್ಕೆ ಆ ದಿನಗಳು ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನ ಮಾಡಲಿದ್ದಾರೆ.