Select Your Language

Notifications

webdunia
webdunia
webdunia
Sunday, 13 April 2025
webdunia

ತುಂಬು ಗರ್ಭಿಣಿಯಾಗಿದ್ದರೂ ಕೆಲಸಕ್ಕೆ ಹಾಜರಾದ ಮಿಲನಾ ನಾಗರಾಜ್

Milana Nagaraj

Krishnaveni K

ಬೆಂಗಳೂರು , ಶನಿವಾರ, 31 ಆಗಸ್ಟ್ 2024 (11:28 IST)
Photo Credit: Instagram

ಬೆಂಗಳೂರು: ಇನ್ನೇನು ಒಂದೋ ಎರಡೋ ವಾರದಲ್ಲಿ ಮೊದಲ ಮಗುವಿಗೆ ಜನ್ಮ ನೀಡಲಿರುವ ನಟಿ ಮಿಲನಾ ನಾಗರಾಜ್ ಈ ಸಂದರ್ಭದಲ್ಲಿಯೂ ತಮ್ಮ ಸಿನಿಮಾ ಕೆಲಸ ಮಾಡಿಕೊಟ್ಟಿದ್ದಾರೆ.
 

ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಹೆರಿಗೆಯಾಗಲಿರುವುದಾಗಿ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಇತ್ತೀಚೆಗಷ್ಟೇ ಮಿಲನಾ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ನೆರವೇರಿಸಲಾಗಿತ್ತು.

ಇದೀಗ ಮಗುವಿನ ಆಗಮನದ ಹೊಸ್ತಿಲಲ್ಲಿಯೂ ಮಿಲನಾ ತಮ್ಮ ಸಿನಿಮಾ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ತುಂಬು ಗರ್ಭಿಣಿ ಮಿಲನಾ ‘ಆರಾಮಾ ಅರವಿಂದ ಸ್ವಾಮಿ’ ಸಿನಿಮಾ ಡಬ್ಬಿಂಗ್ ಕೆಲಸ ಮಾಡಿದ್ದಾರೆ. ಮಗುವಾದ ಬಳಿಕ ಮಿಲನಾ ಕೆಲವು ದಿನಗಳವರೆಗೆ ಸಂಪೂರ್ಣ ವಿಶ್ರಾಂತಿ ಪಡೆಯಬೇಕಾಗುತ್ತದೆ.
 
ಹೀಗಾಗಿ ತಮ್ಮಿಂದಾಗಿ ಸಿನಿಮಾಗೆ ತೊಂದರೆಯಾಗದಂತೆ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಅವರ ಕರ್ತವ್ಯ ಪ್ರಜ್ಞೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಜೊತೆಗೆ ನಿಮಗೆ ಗಂಡು ಮಗುವೇ ಆಗೋದು ಮೇಡಂ ಎಂದು ಭವಿಷ್ಯ ನುಡಿದಿರುವುದಲ್ಲದೆ ಆರೋಗ್ಯ ನೋಡಿಕೊಳ್ಳಿ ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಜೈಲಿನಲ್ಲಿ ಬೆಡ್ ಶೀಟ್ ಗೂ ಅಂಗಲಾಚಬೇಕಾದ ಸ್ಥಿತಿಯಲ್ಲಿ ದರ್ಶನ್