Select Your Language

Notifications

webdunia
webdunia
webdunia
webdunia

ಗರ್ಭಿಣಿ ಪತ್ನಿಯನ್ನು ಕರೆದುಕೊಂಡು ಥೈಲ್ಯಾಂಡ್ ಟೂರ್ ಮಾಡ್ತಿದ್ದಾರೆ ನಟ ಡಾರ್ಲಿಂಗ್ ಕೃಷ್ಣ

Darling Krishna-Milana Nagaraj

Krishnaveni K

ಬೆಂಗಳೂರು , ಬುಧವಾರ, 8 ಮೇ 2024 (15:33 IST)
Photo Courtesy: facebook
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ರೀಲ್ ನಿಂದ ಜನಪ್ರಿಯರಾಗಿ ರಿಯಲ್ ಲೈಫ್ ನಲ್ಲೂ ಜೋಡಿಯಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈಗ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ.

ಮಿಲನಾ ಮತ್ತು ಕೃಷ್ಣ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಮಿಲನಾ ಮಗುವಿಗೆ ಜನ್ಮ ನೀಡಲಿದ್ದಾರೆ. ಸದ್ಯಕ್ಕೆ ಅವರು ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಪತ್ನಿ ಜೊತೆಗಿರಲು ಡಾರ್ಲಿಂಗ್ ಕೃಷ್ಣ ಕೂಡಾ ಶೂಟಿಂಗ್ ನಿಂದ ಬಿಡುವು ಪಡೆದುಕೊಂಡಿದ್ದಾರೆ.

ಈ ಬಿಡುವಿನಲ್ಲಿ ದಂಪತಿ ಥೈಲ್ಯಾಂಡ್ ಪ್ರವಾಸ ಮಾಡಿದ್ದಾರೆ. ಇಲ್ಲಿನ ಸುಂದರ ಪರಿಸರದಲ್ಲಿ ಮಿಲನಾ ಜೊತೆಗಿರುವ ಫೋಟೋಗಳನ್ನು ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಿಲನಾ ಉಬ್ಬು ಹೊಟ್ಟೆ ನೋಡಿ ನೆಟ್ಟಿಗರು ನಾನಾ ಕಾಮೆಂಟ್ ಮಾಡಿದ್ದಾರೆ.

ಕೆಲವರು ಮಿಲನಾ ಉಬ್ಬು ಹೊಟ್ಟೆ ನೋಡಿ ಖಂಡಿತಾ ನಿಮಗೆ ಗಂಡು ಮಗುವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಮತ್ತೆ ಕೆಲವರು ಬೇಬಿ ಬಂಪ್ ನಲ್ಲಿ ಕ್ಯೂಟ್ ಆಗಿ ಕಾಣಿಸ್ತಿದ್ದೀರಿ. ಇದೇ ರೀತಿ ಖುಷಿಯಾಗಿರಿ ಎಂದು ಹಾರೈಸಿದ್ದಾರೆ. ವಾರದ ಹಿಂದಷ್ಟೇ ಮಿಲನಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಡಿ ದಾಳಿ ಬೆನ್ನಲ್ಲೇ ದೇವರ ಮೊರೆ ಹೋಗುತ್ತಿರುವ ಶಿಲ್ಪಾ ಶೆಟ್ಟಿ