Publish Date: Wed, 08 May 2024 (13:22 IST)
Updated Date: Wed, 08 May 2024 (13:27 IST)
Photo Courtesy: Instagram
ಚೆನ್ನೈ: ಕನ್ನಡಿಗ, ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಮತ್ತು ಉಮಾಪತಿ ರಾಮಯ್ಯ ಮದುವೆ ಅದ್ಧೂರಿಯಾಗಿ ನೆರವೇರಲಿದ್ದು, ಮದುವೆ ದಿನಾಂಕವೂ ಬಹಿರಂಗವಾಗಿದೆ.
ಕಳೆದ ವರ್ಷ ಐಶ್ವರ್ಯಾ ಸರ್ಜಾ ತಮ್ಮ ಬಹುಕಾಲದ ಗೆಳೆಯ ಉಮಾಪತಿ ರಾಮಯ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಚೆನ್ನೈನ ಅರ್ಜುನ್ ಸರ್ಜಾ ನಿರ್ಮಿಸಿದ ದೇವಾಲಯದ ಆವರಣದಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತ್ತು.
ಇದೀಗ ಈ ಹಿಂದೆ ನಿಗದಿಯಾಗಿದ್ದಂತೆ ಇದೇ ವರ್ಷ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಜೂನ್ 10 ರಂದು ಚೆನ್ನೈನಲ್ಲಿ ಇಬ್ಬರ ವಿವಾಹ ಕಾರ್ಯಕ್ರಮ ನಡೆಯಲಿದೆ. ಅರ್ಜುನ್ ಸರ್ಜಾ ಬಹುಭಾಷಾ ನಟರಾಗಿರುವುದರಿಂದ ತಮಿಳು, ಕನ್ನಡ, ತೆಲುಗು ಸೇರಿದಂತೆ ಸೌತ್ ಕಲಾವಿದರ ದಂಡೇ ಮದುವೆಗೆ ಬರುವ ನಿರೀಕ್ಷೆಯಿದೆ.
ತಮಿಳು ನಟ ಉಮಾಪತಿ ರಾಮಯ್ಯ ಕೆಲವು ಸಮಯ ಮೊದಲು ಜೊತೆಯಾಗಿ ತಮಿಳು ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದೀಗ ಮನೆಯವರ ಒಪ್ಪಿಗೆ ಪಡೆದುಕೊಂಡು ವಿವಾಹವಾಗುತ್ತಿದ್ದಾರೆ.