Publish Date: Sat, 31 Aug 2024 (11:16 IST)
Updated Date: Sat, 31 Aug 2024 (11:19 IST)
ಬಳ್ಳಾರಿ: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಗೆ ಈಗ ಬೆಡ್ ಶೀಟ್ ಗೂ ಅಂಗಲಾಚಬೇಕಾದ ಪರಿಸ್ಥಿತಿಯಾಗಿದೆ. ರಾತ್ರಿಯಿಡೀ ನಿದ್ರೆಯಿಲ್ಲದೇ ಕಳೆದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನಲೆಯಲ್ಲಿ ದರ್ಶನ್ ರನ್ನು ಮೊನ್ನೆ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಹೊಸ ಜೈಲಿಗೆ ಸ್ಥಳಾಂತರವಾದ ಬಳಿಕ ದರ್ಶನ್ ಇಲ್ಲಿ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಇದುವರೆಗೆ ದರ್ಶನ್ ಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ.
ಮೊದಲ ದಿನ ಸರಿಯಾಗಿ ಊಟ-ತಿಂಡಿ ಮಾಡದೇ ರಾತ್ರಿಯಿಡೀ ನಿದ್ರೆಯಿಲ್ಲದೇ ಕಳೆದಿದ್ದರು. ನಿನ್ನೆಯೂ ಅದೇ ಕತೆಯಾಗಿದೆ. ವಿಪರೀತ ಸೊಳ್ಳೆ ಕಾಟದಿಂದಾಗಿ ತಡರಾತ್ರಿಯವರೆಗೂ ನಿದ್ರೆಯಿಲ್ಲದೇ ಕಳೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಂತೆ ಇಲ್ಲಿ ಯಾವುದೇ ವಿಶೇಷ ಸವಲತ್ತುಗಳಿಲ್ಲ.
ಯಾವುದೇ ವಿಶೇಷ ಸವಲತ್ತುಗಳನ್ನು ನೀಡದಂತೆ ಜೈಲಿನ ಸಿಬ್ಬಂದಿಗಳಿಗೆ ಸ್ಪಷ್ಟ ಸಂದೇಶ ಕೊಡಲಾಗಿದೆ. ಹೀಗಾಗಿ ದರ್ಶನ್ ಗೆ ಇಲ್ಲಿ ದಿನ ಕಳೆಯುವುದು ಕಷ್ಟವಾಗುತ್ತಿದೆ. ಸೊಳ್ಳೆ ಕಾಟ ತಡೆಯಲಾಗದೇ ಮನೆಯಿಂದ ತಂದ ಬೆಡ್ ಶೀಟ್ ಆದರೂ ಕೊಡಿ ಎಂದು ಮನವಿ ಮಾಡಿದ್ದಾರೆ. ತಮ್ಮ ಜೊತೆಗೆ ತಂದಿದ್ದ ಲಲಿತಾ ಸಹಸ್ರನಾಮ, ಆಧ್ಯಾತ್ಮದ ಪುಸ್ತಕಗಳನ್ನು ಓದುತ್ತಾ ದಿನ ಕಳೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.