Publish Date: Tue, 12 Dec 2017 (11:10 IST)
Updated Date: Tue, 12 Dec 2017 (11:12 IST)
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ವಿಜೇತ, ನಟ ಪ್ರಥಮ್ ಬಹುಭಾಷಾ ತಾರೆ ಪ್ರಕಾಶ್ ರೈ ಸೋ ಕಾಲ್ಡ್ ನಟ ಎಂದು ಲಘುವಾಗಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ. ನಂತರ ಅದಕ್ಕೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಕಿಡಿ ಕಾರುತ್ತಿರುವ ಪ್ರಕಾಶ್ ರೈ ಮೇಲೆ ಪ್ರಥಮ್ ಕಿಡಿ ಕಾರಿದ್ದರು. ಕರ್ನಾಟಕದಲ್ಲಿ ಬದುಕುವುದಕ್ಕೆ ಭಯದ ವಾತಾವರಣವಿದೆ ಎಂದು ಹೇಳಿ ಕನ್ನಡಿಗರಿಗೆ ಅವಮಾನ ಮಾಡಬೇಡಿ. ಅಷ್ಟೊಂದು ಭಯ ಇರುವವರು ಇಲ್ಲಿಗೆ ಬರೋದ್ಯಾಕೆ? ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಪ್ರಕಾಶ್ ನಟನೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನೀನಲ್ಲ ಎಂದು ಕಿಡಿ ಕಾರಿದ್ದಾರೆ.
ಈ ಬಗ್ಗೆ ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಪ್ರಥಮ್, ನಾನು ಹೇಳಿರುವ ಉದ್ದೇಶ, ಎಲ್ಲ ಧರ್ಮದವರಿಗೂ ಬದುಕುವ ಹಕ್ಕಿದೆ. ಅವರವರ ಹಕ್ಕಿಗಾಗಿ ಹೋರಾಡಲಿ. ನಿಮಗೇನು ತೊಂದರೆ. ಕನ್ನಡ ನಾಡಿನ ಬಗ್ಗೆ ಯಾರೂ ಅನುಮಾನ ಪಡುವ ಹಾಗಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ