Publish Date: Tue, 12 Dec 2017 (09:50 IST)
Updated Date: Tue, 12 Dec 2017 (09:54 IST)
ಬೆಂಗಳೂರು: ನಿನ್ನೆಯಷ್ಟೇ ನಟ ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಾಹಸಸಿಂಹ ವಿಷ್ಣು ವರ್ಧನ್ ಸ್ಮಾರಕ ವಿಚಾರ ಚರ್ಚಿಸಿದ್ದರು. ಆದರೆ ಇದೀಗ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಕೆಂಗಣ್ಣಿಗೆ ಗುರಿಯಾಗಿದೆ.
ಸಿಎಂ ಭೇಟಿ ಮಾಡಿದ್ದ ಸುದೀಪ್, ವಿಷ್ಣುವರ್ಧನ್ ಸಮಾಧಿ ಸ್ಥಳ ಪುಣ್ಯ ಭೂಮಿ. ಅದನ್ನು ಮೈಸೂರಿಗೆ ಸ್ಥಳಾಂತರಿಸಬೇಡಿ. ಸ್ಮಾರಕ ಎಲ್ಲಿ ಬೇಕಾದರೂ ನಿರ್ಮಿಸಿ ಎಂದು ಮನವಿ ಪತ್ರವನ್ನೂ ನೀಡಿದ್ದರು.
ಆದರೆ ಇದಕ್ಕೆ ಭಾರತಿ ವಿಷ್ಣುವರ್ಧನ್ ಆಕ್ಷೇಪಿಸಿದ್ದಾರೆ. ಈ ಮೊದಲಿನಿಂದಲೂ ಭಾರತಿ ವಿಷ್ಣುವರ್ಧನ್ ಸಮಾಧಿಯನ್ನು ಮೈಸೂರಿಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದರು. ಆದರೆ ಇದೀಗ ಸುದೀಪ್ ಬೆಂಗಳೂರಿನಲ್ಲಿಯೇ ಸ್ಮಾರಕವಿರಲಿ. ಚಿತ್ರರಂಗ ಆ ಸ್ಥಳವನ್ನು ಖರೀದಿಸುತ್ತದೆ ಎಂದಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ವಿಷ್ಣು ಸಮಾಧಿ ಮೈಸೂರಿಗೆ ಸ್ಥಳಾಂತರಿಸುವ ಕುರಿತು ಈಗಾಗಲೇ ಸಿಎಂ ಒಪ್ಪಿದ್ದರು. ಇದಕ್ಕೆ 2 ಕೋಟಿ ರೂ. ಮೀಸಲಿರಿಸಿದೆ. ಇಲ್ಲಿ ಹಣದ ಪ್ರಶ್ನೆಯಲ್ಲ. ಸುದೀಪ್ ಗೆ ಇಲ್ಲಿನ ಸಮಸ್ಯೆ ಗೊತ್ತಿಲ್ಲ. ಹಣದ ಕೊರತೆಯಿದ್ದರೆ ನಮ್ಮ ಕುಟುಂಬವೇ ಭರಿಸುತ್ತಿತ್ತು. ಯಾರ್ಯಾರು ಬಂದು ಸಿಎಂರನ್ನು ಭೇಟಿಯಾಗಿ ಚರ್ಚಿಸುತ್ತಾರೆ ಎಂದು ನಮಗೇ ಗೊತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ