Publish Date: Sun, 10 Dec 2017 (11:41 IST)
Updated Date: Sun, 10 Dec 2017 (11:47 IST)
ಬೆಂಗಳೂರು: ‘ಭಾರತರತ್ನ’ಕ್ಕೆ ಮಾಜಿ ಸಿಎಂ ನಿಜಲಿಂಗಪ್ಪ ಹೆಸರು ಶಿಫಾರಸು ಮಾಡುವ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌದದ ಬಳಿ ನೀಡಿದ್ದಾರೆ.
ನಿಜಲಿಂಗಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಈ ಭರವಸೆ ನೀಡಿದ್ದಾರೆ. ‘ನಿಜಲಿಂಗಪ್ಪ ಈ ರಾಜ್ಯ ದೇಶ ಕಂಡ ಅಪ್ರತಿಮ ನಾಯಕ, ಕೈ, ಬಾಯಿ ಶುದ್ಧವಾಗಿಟ್ಟುಕೊಂಡ ಜನನಾಯಕ, ನೀರಾವರಿ ಕ್ಷೇತ್ರದಲ್ಲಿ ಅವರು ಅಪಾರ ಕೊಡುಗೆ ನೀಡಿದ್ದಾರೆ' ಎಂದು ಸಿಎಂ ಹೊಗಳಿದ್ದಾರೆ.
ವಿಧಾನಸೌಧದ ಬಳಿ ಇರುವ ನಿಜಲಿಂಗಪ್ಪ ಅವರ ಪ್ರತಿಮೆ ಸರಿಯಿಲ್ಲ, ಇದು ನಿಜಲಿಂಪ್ಪ ಅವರನ್ನು ಹೋಲುತ್ತಿಲ್ಲ, ಪ್ರತಿಮೆ ಬದಲಿಸಿ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿಕೊಂಡಿದ್ದರು, ಮನವಿ ಹಿನ್ನೆಲೆ ಪ್ರತಿಮೆ ಬದಲಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ