Select Your Language

Notifications

webdunia
webdunia
webdunia
webdunia

ಲಂಡನ್ ನಲ್ಲಿ ದುಬಾರಿ ಮನೆ ಮಾಡಿದ ಪ್ರಭಾಸ್: ಬಾಡಿಗೆ ಎಷ್ಟು ಗೊತ್ತಾ?

Prabhas

Krishnaveni K

ಹೈದರಾಬಾದ್ , ಮಂಗಳವಾರ, 27 ಫೆಬ್ರವರಿ 2024 (14:38 IST)
Photo Courtesy: Twitter
ಹೈದರಾಬಾದ್: ಸಿನಿಮಾಗಳಿಂದ ಬ್ರೇಕ್ ಪಡೆದಿರುವ ಟಾಲಿವುಡ್ ಸ್ಟಾರ್ ಪ್ರಭಾಸ್ ಈಗ ಲಂಡನ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಲಂಡನ್ ನಲ್ಲಿ ಕಾಲ ಕಳೆಯಲೆಂದೇ ಪ್ರಭಾಸ್ ಮನೆ ಬಾಡಿಗೆಗೆ ಪಡೆದಿದ್ದಾರೆ.

ಕೆಲವು ದಿನ ಲಂಡನ್ ನಲ್ಲಿ ಕಾಲ ಕಳೆಯಲಿರುವ ಪ್ರಭಾಸ್ ಬಳಿಕ ಭಾರತಕ್ಕೆ ಮರಳಲಿದ್ದಾರೆ. ಲಂಡನ್ ನಲ್ಲಿ ನೆಲೆಸಲು ಪ್ರಭಾಸ್ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಮನೆಗೆ ಅವರು ಬರೋಬ್ಬರಿ 60 ಲಕ್ಷ ರೂ. ಮಾಸಿಕ ಬಾಡಿಗೆ ಪಾವತಿಸಲಿದ್ದಾರೆ. ಇದು ಲಂಡನ್ ಗೆ ಹೋದಾಗಲೆಲ್ಲಾ ಕಾಲ ಕಳೆಯಲೆಂದೇ ಪ್ರಭಾಸ್ ಮಾಡಿರುವ ತಾತ್ಕಾಲಿಕ ವ್ಯವಸ್ಥೆಯಾಗಿದೆ.

ಸ್ಟಾರ್ ನಟರು ವಿದೇಶದಲ್ಲಿ ಕಾಲ ಕಳೆಯಲೆಂದೇ ಮನೆ ಮಾಡಿಕೊಳ್ಳುವುದು ಇದೇ ಮೊದಲೇನಲ್ಲ. ಮಹೇಶ್ ಬಾಬು, ರಾಜಮೌಳಿ ಸೇರಿದಂತೆ ಸ್ಟಾರ್ ಕಲಾವಿದರು ವಿದೇಶದಲ್ಲಿ ಮನೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಕಾಲ ಪ್ರಭಾಸ್ ಇಲ್ಲಿಯೇ ನೆಲೆಸಲಿದ್ದಾರೆ. ಆ ಬಳಿಕ ಭಾರತಕ್ಕೆ ಬಂದು ಪ್ರಾಜೆಕ್ಟ್ ಕೆ, ಸ್ಪಿರಿಟ್ ಮತ್ತು ಸಲಾರ್ 2 ಸಿನಿಮಾಗಳ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

ಇತ್ತೀಚೆಗೆ ಸಲಾರ್ ಪಾರ್ಟ್ 1 ಬಿಡುಗಡೆಯಾಗಿ ಪ್ರಭಾಸ್ ಗೆ ಸಕ್ಸಸ್ ಸಿಕ್ಕಿತ್ತು. ಇದರ ಬೆನ್ನಲ್ಲೇ ಕೆಲವು ದಿನಗಳ ತಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಭಾಸ್ ಬ್ರೇಕ್ ಪಡೆದಿದ್ದಾರೆ. ಇದಾದ ಬಳಿಕ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಕೆಲವು ಸಮಯ ಪ್ರಭಾಸ್ ಬ್ಯುಸಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್-ಜೆನಿಲಿಯಾ ಡಿಸೋಜಾ ಬಾಂಧವ್ಯಕ್ಕೆ ಸಾಕ್ಷಿಯಾದ ಸಿಸಿಎಲ್ ಮ್ಯಾಚ್