Select Your Language

Notifications

webdunia
webdunia
webdunia
webdunia

ಫಸ್ಟ್ ಸಿಂಗಲ್ ಬಿಡುಗಡೆಗೆ ಸಿದ್ಧವಾದ ‘ಯುವ’

Yuva Movie

Krishnaveni K

ಬೆಂಗಳೂರು , ಸೋಮವಾರ, 26 ಫೆಬ್ರವರಿ 2024 (15:19 IST)
Photo Courtesy: Twitter
ಬೆಂಗಳೂರು: ದೊಡ್ಮನೆ ಕುಡಿ ಯುವರಾಜ್ ಕುಮಾರ್ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಿರುವ ಯುವ ಸಿನಿಮಾ ತಂಡದಿಂದ ಬಿಗ್ ಅಪ್ ಡೇಟ್ ಒಂದು ಸಿಕ್ಕಿದೆ.

ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವ ಸಿನಿಮಾದ ಮೊದಲ ಹಾಡು ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಮಾರ್ಚ್ 2 ರಂದು ಯುವ ಸಿನಿಮಾದ ಒಬ್ಬನೇ ಶಿವ ಒಬ್ಬನೇ ಯುವ ಎನ್ನುವ ಸಾಲಿನ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗುತ್ತಿದೆ. ಯುವ ಸಿನಿಮಾ ಕಡೆಯಿಂದ ಸಿಗುತ್ತಿರುವ ಮೊದಲ ಅಪ್ ಡೇಟ್ ಇದಾಗಿದೆ.

ಹೀಗಾಗಿ ದೊಡ್ಮನೆ ಅಭಿಮಾನಿಗಳಲ್ಲಿ ಭಾರೀ ಖುಷಿಯಿದೆ. ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ದೊಡ್ಮನೆ ಅಭಿಮಾನಿಗಳು ಯುವರಾಜ್ ಕುಮಾರ್ ಅವರಲ್ಲಿ ಪುನೀತ್ ರನ್ನು ನೋಡುತ್ತಿದ್ದಾರೆ. ಚಿತ್ರರಂಗಕ್ಕೆ ಭವಿಷ್ಯದಲ್ಲಿ ಡಾ.ರಾಜ್ ಕುಟುಂಬದಿಂದ ಮತ್ತೊಂದು ಸ್ಟಾರ್ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಯುವ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ಇದೊಂದು ಯೂಥ್ ಫುಲ್ ಸ್ಟೋರಿಯಾಗಿದ್ದು, ಮಾರ್ಚ್ 29 ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರದ ಅಡಿಯೋ ಹಕ್ಕುಗಳು ಆನಂದ್ ಅಡಿಯೋ ಕಂಪನಿಗೆ ದಾಖಲೆಯ 3 ಕೋಟಿ ರೂ.ಗೆ ಸೇಲ್ ಆಗಿತ್ತು. ಕಾಂತಾರ ಖ್ಯಾತಿಯ ಅಜನೀಶ್ ಬಿ ಲೋಕನಾತ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ಯುವಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದೊಡ್ಮನೆ ವಂಶದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸಿನಿಮಾ ಇದಾಗಿರುವುದರಿಂದ ರಿಲೀಸ್ ಕೂಡಾ ಜೋರಾಗಿಯೇ ನಡೆಯುತ್ತಿದೆ. ಮೊದಲ ಹಾಡನ್ನು ಚಾಮರಾಜನಗರ ದೇವಸ್ಥಾನ ಮೈದಾನದಲ್ಲಿ ಜನರ ಮುಂದೆ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಐ ಸಿನಿಮಾದ ಮತ್ತೊಂದು ಹಾಡು ಲಾಂಚ್ ಮಾಡ್ತಿದ್ದಾರೆ ಉಪೇಂದ್ರ