Select Your Language

Notifications

webdunia
webdunia
webdunia
webdunia

ಕೆಂಪೇಗೌಡನಾಗಿ ತೆರೆ ಮೇಲೆ ವಿಜೃಂಭಿಸಲಿದ್ದಾರಾ ಯುವರಾಜ್ ಕುಮಾರ್?!

ಕೆಂಪೇಗೌಡನಾಗಿ ತೆರೆ ಮೇಲೆ ವಿಜೃಂಭಿಸಲಿದ್ದಾರಾ ಯುವರಾಜ್ ಕುಮಾರ್?!
ಬೆಂಗಳೂರು , ಸೋಮವಾರ, 26 ಜೂನ್ 2023 (09:00 IST)

ಬೆಂಗಳೂರು: ದೊಡ್ಮನೆ ಕುಡಿ ಯುವರಾಜ್ ಕುಮಾರ್ ಮೊದಲ ಸಿನಿಮಾವೇ ಬಿಡುಗಡೆಯಾಗಿಲ್ಲ. ಹಾಗಿದ್ದರೂ ಯುವ ಮೇಲೆ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯಿದೆ. 

ಯುವರಾಜ್ ಕುಮಾರ್ ಈಗ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ನಡುವೆ ಅವರು ಟಿ.ಎಸ್. ನಾಗಾಭರಣ ಅವರ ಐತಿಹಾಸಿಕ ಸಿನಿಮಾಗೆ ನಾಯಕರಾಗುವ ಮಾತು ಕೇಳಿಬರುತ್ತಿದೆ.

 ನಾಗಾಭರಣ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜೀವನ ಕುರಿತಾಗಿ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಈ ಸಿನಿಮಾದಲ್ಲಿ ಯುವರಾಜ್ ಕುಮಾರ್ ಅವರನ್ನೇ ಕೆಂಪೇಗೌಡರ ಪಾತ್ರಕ್ಕೆ ಕರೆತರಲು ನಾಗಾಭರಣ ಚಿಂತನೆ ನಡೆಸಿದ್ದಾರಂತೆ. ಒಂದು ವೇಳೆ ಯುವ ಈ ಪಾತ್ರ ಮಾಡಿದರೆ ಅದು ಅವರ ಚಿತ್ರಜೀವನದಲ್ಲಿ ಮಹತ್ವದ ಸಿನಿಮಾವಾಗುವುದಂತೂ ಖಂಡಿತಾ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಚಿತ್ ಸಿನಿಮಾಗೆ ಸಾನ್ವಿ ಸುದೀಪ್ ಗಾಯನ: ಟೀಸರ್ ಲಾಂಚ್ ನಲ್ಲಿ ಕಿಚ್ಚನ ಪುತ್ರಿಯ ಹಾಡು