Select Your Language

Notifications

webdunia
webdunia
webdunia
webdunia

ಸಂಚಿತ್ ಸಿನಿಮಾಗೆ ಸಾನ್ವಿ ಸುದೀಪ್ ಗಾಯನ: ಟೀಸರ್ ಲಾಂಚ್ ನಲ್ಲಿ ಕಿಚ್ಚನ ಪುತ್ರಿಯ ಹಾಡು

ಸಂಚಿತ್ ಸಿನಿಮಾಗೆ ಸಾನ್ವಿ ಸುದೀಪ್ ಗಾಯನ: ಟೀಸರ್ ಲಾಂಚ್ ನಲ್ಲಿ ಕಿಚ್ಚನ ಪುತ್ರಿಯ ಹಾಡು
ಬೆಂಗಳೂರು , ಸೋಮವಾರ, 26 ಜೂನ್ 2023 (08:40 IST)
Photo Courtesy: Twitter

ಬೆಂಗಳೂರು: ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಚೊಚ್ಚಲ ಸಿನಿಮಾ ‘ಜಿಮ್ಮಿ’ ಟೀಸರ್ ಲಾಂಚ್ ಅದ್ಧೂರಿಯಾಗಿ ನಡೆದಿದೆ. ಈ ಸಿನಿಮಾದಲ್ಲಿ ಇನ್ನೊಂದು ವಿಶೇಷತೆ ಕಿಚ್ಚ ಸುದೀಪ್ ಪುತ್ರಿ ಸಾನ್ವಿಯ ಹಾಡು.

ಸಾನ್ವಿ ಸುದೀಪ್ ಉತ್ತಮ ಗಾಯಕಿ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದುವರೆಗೆ ಅವರು ಸಿನಿಮಾಗೆ ಹಾಡಿರಲಿಲ್ಲ. ಆದರೆ ಸಂಚಿತ್ ಚೊಚ್ಚಲ ನಿರ್ದೇಶನ, ನಟನೆಯ ‘ಜಿಮ್ಮಿ’ ಸಿನಿಮಾಗಾಗಿ ಸಾನ್ವಿ ಮೊದಲ ಬಾರಿಗೆ ಹಾಡಿದ್ದಾರೆ. 

ಸಾನ್ವಿ ಆಂಗ್ಲ ಶೈಲಿಯ ಹಾಡು ಹಾಡುವುದರಲ್ಲಿ ಫೇಮಸ್. ಈ ಸಿನಿಮಾದಲ್ಲೂ ಅಂತಹದ್ದೇ ಒಂದು ಹಾಡನ್ನು ಹಾಡಿದ್ದು, ಹಾಡಿಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಅಷ್ಟೇ ಅಲ್ಲ, ಟೀಸರ್ ಲಾಂಚ್ ವೇದಿಕೆ ಮೇಲೆ ಅದ್ಭುತವಾಗಿ ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ ಸಾನ್ವಿ.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಒಂದಾದ್ರಾ ರಶ್ಮಿಕಾ-ವಿಜಯ್ ದೇವರಕೊಂಡ? ಫ್ಯಾಮಿಲಿ ಸಮೇತ ಡಿನ್ನರ್ ಡೇಟ್