Publish Date: Mon, 05 Jun 2023 (16:11 IST)
Updated Date: Mon, 05 Jun 2023 (16:13 IST)
ಬೆಂಗಳೂರು: ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್-ಅವಿವಾಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಮದುವೆ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಆಗಮಿಸಿದ್ದರು. ಮದುವೆಗೆ ಕುಟುಂಬ ಸಮೇತ ಆಗಮಿಸಿದ ಕಿಚ್ಚ ಸುದೀಪ್ ಅಭಿಗೆ ಚಿನ್ನದ ಸರ ಗಿಫ್ಟ್ ನೀಡಿದ್ದಾರೆ. ಅಭಿಗೆ ವಿಶ್ ಮಾಡಿ ಬಳಿಕ ತಾವೇ ಸ್ವತಃ ಕುತ್ತಿಗೆಗೆ ಚಿನ್ನದ ಸರ ಹಾಕಿ ಹರಸಿದ್ದಾರೆ.
ಮದುವೆಗೆ ಸೂಪರ್ ಸ್ಟಾರ್ ರಜನೀಕಾಂತ್, ಸುಹಾಸಿನಿ ಮಣಿರತ್ನಂ, ಮೋಹನ್ ಬಾಬು, ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ದಂಪತಿ, ಪವಿತ್ರಾ ಲೋಕೇಶ‍್, ನರೇಶ್, ಮೇಘನಾ ರಾಜ್, ಭಾರತಿ ವಿಷ್ಣುವರ್ಧನ್ ಕುಟುಂಬ, ಪ್ರಿಯಾಂಕ ಉಪೇಂದ್ರ, ಗಾಯಕ ವಿಜಯ್ ಪ್ರಕಾಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ ದಂಪತಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.