ಬೆಂಗಳೂರು: ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ ಮದುವೆ ಸಂಭ್ರಮ ಕಳೆಗಟ್ಟಿದೆ. ಇಬ್ಬರ ಮನೆಯಲ್ಲೂ ವಿವಾಹಪೂರ್ವ ಶಾಸ್ತ್ರಗಳು ನಡೆಯುತ್ತಿವೆ. 
									
			
			 
 			
 
 			
			                     
							
							
			        							
								
																	ಅಭಿಷೇಕ್ ಮತ್ತು ಅವಿವಾ ಮೆಹಂದಿ ಶಾಸ್ತ್ರಗಳು ನಿನ್ನೆ ನೆರವೇರಿದ್ದು ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
									
										
								
																	ಅಭಿಷೇಕ್ ಕೈಯಲ್ಲಿ ತಮ್ಮ ಪ್ರೀತಿ ಪಾತ್ರರೆಲ್ಲರ ಹೆಸರುಗಳನ್ನು ಬರೆಯಿಸಿಕೊಂಡಿದ್ದಾರೆ. ತಂದೆ ಅಂಬರೀಶ್ ಹೆಸರನ್ನು ರೆಬಲ್
ಎಂದು ತಾಯಿ ಸುಮಲತಾ ಹೆಸರನ್ನು ಸುಮ ಎಂದು ಭಾವೀ ಪತ್ನಿ ಅವಿವಾ ಹೆಸರನ್ನೂ ಬರೆಯಸಿಕೊಂಡಿದ್ದಾರೆ. ಇದೆಲ್ಲರದರ ಜೊತೆಗೆ ಮಂಡ್ಯ ಎಂದು ಬರೆಯಿಸಿಕೊಂಡಿರುವುದು  ವಿಶೇಷ. ಇತ್ತ, ಅವಿವಾ ಕೈಯಲ್ಲಿ ತನ್ನ ಮತ್ತು ಅಭಿ ಹೆಸರನ್ನು ಒಟ್ಟಾಗಿ ಅಬಿವ ಎಂದು ಬರೆಯಿಸಿಕೊಂಡಿದ್ದಾರೆ.