Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್-ಜೆನಿಲಿಯಾ ಡಿಸೋಜಾ ಬಾಂಧವ್ಯಕ್ಕೆ ಸಾಕ್ಷಿಯಾದ ಸಿಸಿಎಲ್ ಮ್ಯಾಚ್

Kiccha Sudeep-Genelia

Krishnaveni K

ದುಬೈ , ಮಂಗಳವಾರ, 27 ಫೆಬ್ರವರಿ 2024 (11:59 IST)
Photo Courtesy: Twitter
ದುಬೈ: ಕಿಚ್ಚ ಸುದೀಪ್ ಮತ್ತು ಬಹುಭಾಷಾ ಬೆಡಗಿ ಜೆನಿಲಿಯಾ ಡಿಸೋಜಾ-ರಿತೇಶ್ ದೇಶ್ ಮುಖ್ ದಂಪತಿ ನಡುವೆ ಎಷ್ಟು ಒಳ್ಳೆಯ ಸ್ನೇಹ ಸಂಬಂಧವಿದೆ ಎಂಬುದು ಅಭಿಮಾನಿಗಳಿಗೆ ಗೊತ್ತು.

ಕಿಚ್ಚನ ಯಾವುದೇ ಸಿನಿಮಾವಾಗಿರಲಿ, ವಿಶೇಷ ಕ್ಷಣಗಳಾಗಿರಲಿ ಜೆನಿಲಿಯಾ, ರಿತೇಶ್ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡುವುದನ್ನು ಮರೆಯುವುದಿಲ್ಲ. ಕಿಚ್ಚ ಸುದೀಪ್ ಕೂಡಾ ಜೆನಿಲಿಯಾ ಮತ್ತು ರಿತೇಶ್ ಜೋಡಿಯ ಹುಟ್ಟುಹಬ್ಬ, ಸಿನಿಮಾ ಸಂಬಂಧಿತ ಕೆಲಸಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡುತ್ತಿರುತ್ತಾರೆ.

ಇದೀಗ ಜೆನಿಲಿಯಾ ಮತ್ತು ಸುದೀಪ್ ನಡುವೆ ಎಷ್ಟು ಒಳ್ಳೆಯ ಬಾಂಧವ್ಯವಿದೆ ಎನ್ನುವುದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದ ವೇಳೆ ಗೊತ್ತಾಗಿದೆ. ಶಾರ್ಜಾದಲ್ಲಿ ನಡೆದ ಮುಂಬೈ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವಿನ ಪಂದ್ಯದಲ್ಲಿ ಸುದೀಪ್ ಮತ್ತು ಜೆನಿಲಿಯಾ ಭೇಟಿಯಾಗಿದ್ದಾರೆ. ಮೈದಾನದಲ್ಲಿ ಸುದೀಪ್ ನೋಡಿ ಜೆನಿಲಿಯಾ ಮುಂಬೈ ಡಗೌಟ್ ನಿಂದ ಓಡಿ ಬಂದು ಖುಷಿಯಿಂದ ತಬ್ಬಿಕೊಂಡಿದ್ದಾರೆ. ಬಳಿಕ ಜೊತೆಯಾಗಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

ಇಬ್ಬರ ಬಾಂಧವ್ಯ ನೋಡಿ ನೆಟ್ಟಿಗರು ಸ್ನೇಹಿತರು ಅಂದರೆ ಹೀಗಿರಬೇಕು ಎಂದಿದ್ದಾರೆ. ಜೆನಿಲಿಯಾ ಮತ್ತು ಸುದೀಪ್ ಜೊತೆಗೆ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಕೂಡಾ ಸೇರಿಕೊಂಡಿದ್ದಾರೆ. ಕಿಚ್ಚ ಸುದೀಪ್ ಗೆ ಬಾಲಿವುಡ್ ನಲ್ಲೂ ಅನೇಕ ಸ್ನೇಹಿತರಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ.

Share this Story:

Follow Webdunia kannada

ಮುಂದಿನ ಸುದ್ದಿ

ಕರಟಕ ದಮನಕ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಕಿಚ್ಚ ಸುದೀಪ್