Select Your Language

Notifications

webdunia
webdunia
webdunia
webdunia

ಮ್ಯಾಕ್ಸ್ ಸಿನಿಮಾ ಶೂಟಿಂಗ್ ನಲ್ಲಿ ಇನ್ನು ಏನೇನು ಬಾಕಿಯಿದೆ? ಇಲ್ಲಿದೆ ಡೀಟೈಲ್ಸ್

Kiccha Sudeep

Krishnaveni K

ಬೆಂಗಳೂರು , ಬುಧವಾರ, 21 ಫೆಬ್ರವರಿ 2024 (14:01 IST)
Photo Courtesy: Twitter
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾ ಶೂಟಿಂಗ್ ಎಲ್ಲಿಯವರೆಗೆ ಬಂತು ಎಂದು ಅಭಿಮಾನಿಗಳು ಅವರನ್ನು ಕೇಳುತ್ತಲೇ ಇರುತ್ತಾರೆ.

ಸುದೀಪ್ ಎಲ್ಲೇ ಹೋದರೂ ಅಪ್ ಡೇಟ್ ಕೊಡಿ, ಟೀಸರ್ ಬಿಡಿ ಎಂದು ಕೇಳುತ್ತಲೇ ಇರುತ್ತಾರೆ. ಇದಕ್ಕೆ ಸುದೀಪ್ ಕೂಡಾ ಸಾಕಷ್ಟು ಬಾರಿ ಉತ್ತರ ಕೊಟ್ಟಿದ್ದಾರೆ. ಹಾಗಿದ್ದರೂ ಅಭಿಮಾನಿಗಳು ಮಾತ್ರ ಕೇಳುವುದನ್ನು ಬಿಟ್ಟಿಲ್ಲ. ಇದೀಗ ನಿರ್ದೇಶಕರು ಟೀಸರ್ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಸಿಹಿ ಸುದ್ದಿ ಸಿಕ್ಕಿದೆ. ಹಾಗಿದ್ದರೆ ಶೂಟಿಂಗ್ ಎಲ್ಲಿಯವರೆಗೆ ಬಂದಿದೆ?

ಮ್ಯಾಕ್ಸ್ ಸಿನಿಮಾ ಶೂಟಿಂಗ್ ಚೆನ್ನೈನಲ್ಲಿ ವಿಶೇಷ ಸೆಟ್ ನಲ್ಲಿ ನಡೆಸಲಾಗಿದೆ. ಈ ಸಿನಿಮಾ ಶೂಟಿಂಗ್ ಈಗ ಅಂತಿಮ ಹಂತದಲ್ಲಿದೆ. ಇನ್ನು 10 ರಿಂದ 15 ದಿನಗಳಲ್ಲಿ ಶೂಟಿಂಗ್ ಮುಗಿದು ಹೋಗಲಿದೆ. ಐದು ದಿನ ಹಾಡುಗಳ ಚಿತ್ರೀಕರಣವಿರಲಿದೆ. ಕ್ಲೈಮ್ಯಾಕ್ಸ್ ನಲ್ಲೂ ವಿಶೇಷ ಹಾಡು ಇರಲಿದೆ. ಮಾರ್ಚ್ ನಲ್ಲಿ ಡಬ್ಬಿಂಗ್ ಕೆಲಸಗಳು ನಡೆಯಲಿದೆ. ಜೂನ್ ಅಥವಾ ಜೂನ್ ನಲ್ಲಿ ಚಿತ್ರ ತೆರೆಗೆ ತರಲು ತಂಡ ಸಿದ್ಧತೆ ನಡೆಸಿದೆ. ಸುದೀಪ್ ಅಂತಿಮ ಹಂತದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು ಇತ್ತೀಚೆಗೆ ಚೆನ್ನೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು.

ವಿಕ್ರಾಂತ್ ರೋಣ ಸಿನಿಮಾ ಬಳಿಕ ಬಹಳಷ್ಟು ಗ್ಯಾಪ್ ತೆಗೆದುಕೊಂಡು ಸುದೀಪ್ ಮಾಡುತ್ತಿರುವ ಸಿನಿಮಾವಿದು. ಸಹಜವಾಗಿಯೇ ಸುದೀಪ್ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾ ಮೂಡಿಬರಲಿದೆ. ಇದೊಂದು ಮಾಸ್ ಥ್ರಿಲ್ಲರ್ ಸಿನಿಮಾವಾಗಿದ್ದು ಚಿತ್ರತಂಡ ಇದುವರೆಗೆ ಕೇವಲ ಒಂದು ಫಸ್ಟ್ ಲುಕ್ ಪೋಸ್ಟರ್ ಮಾತ್ರ ಹೊರಬಿಟ್ಟಿತ್ತು.

ಇದಾದ ಬಳಿಕ ಇನ್ನೆರಡು ಸಿನಿಮಾಗಳನ್ನು ಸುದೀಪ್ ಒಪ್ಪಿಕೊಂಡಿದ್ದಾರೆ. ಒಂದು ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಜೊತೆಗೆ. ಈ ಸಿನಿಮಾಗೆ ಬಿಲ್ಲ ರಂಗ ಭಾಷ ಎಂದು ಟೈಟಲ್ ಕೂಡಾ ಫಿಕ್ಸ್ ಆಗಿದೆ. ಮ್ಯಾಕ್ಸ್ ಮುಗಿದ ಬಳಿಕ ಸುದೀಪ್ ಈ ಸಿನಿಮಾದಲ್ಲಿ ಅಭಿನಯಿಸುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ದುರಂತದಿಂದ ಪಾರಾದ ಬಳಿಕ ಪತ್ನಿ, ಮಕ್ಕಳ ಮುಂದೆ ಭಾವುಕರಾದ ಧ್ರುವ ಸರ್ಜಾ