Publish Date: Sat, 19 Dec 2020 (10:20 IST)
Updated Date: Sat, 19 Dec 2020 (10:31 IST)
ಚೆನ್ನೈ : ನಟ ಸಿಂಬು ಅವರು ಈಶ್ವರನ್ ಚಿತ್ರ ಮುಗಿಸುವುದರೊಂದಿಗೆ ಪ್ರಸ್ತುತ ವೆಂಕಟ್ ಪ್ರಭು ನಿರ್ದೇಶನದ ಕಾನ್ಫರೆನ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸುಂಗಂದ್ರನ್ ನಿರ್ದೇಶನದ ಈಶ್ವರನ್ ಚಿತ್ರವನ್ನು ಸಂಕ್ರಾಂತಿ ಹಬ್ಬದಂದು ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಈ ಮಧ್ಯೆ ವಿಜಯ್ ಅಭಿನಯದ ಮಾಸ್ಟರ್ ಚಿತ್ರವನ್ನು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡಗಡೆ ಮಾಡಲು ಮಾತುಕತೆ ನಡೆಯುತ್ತಿದೆ.
ಆದರೆ ಈಶ್ವರನ್ ಚಿತ್ರವನ್ನು ಕೇವಲ 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇರುವ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡಲು ನಿರ್ಮಾಣ ಸಂಸ್ಥೆ ನಿರ್ಧರಿಸಿದೆ ಎನ್ನಲಾಗಿದೆ. ಅಲ್ಲದೇ ಜನವರಿಯ ಕೊನೆಯಲ್ಲಿ ಸಿಂಬು ಜನ್ಮದಿನಕ್ಕೆ ಸಮೀಪದಲ್ಲಿ ಈಶ್ವರನ್ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ ಎಂಬ ವದಂತಿ ಇದೆ.