Publish Date: Sat, 19 Dec 2020 (09:22 IST)
Updated Date: Sat, 19 Dec 2020 (09:23 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾದ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹೊಸ ದಾಖಲೆ ಬರೆದಿದೆ.
ಬಿಡುಗಡೆಯಾದ ಒಂದೇ ದಿನದಲ್ಲಿ ಮೂರು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದ ಮೊದಲ ಕನ್ನಡ ಸಿನಿಮಾ ಎಂದ ದಾಖಲೆಯನ್ನು ಮದಗಜ ಮಾಡಿದೆ. ಉಮಾಪತಿ ಗೌಡ ನಿರ್ಮಾಣದ ಈ ಸಿನಿಮಾ ಮೊನ್ನೆ ಬಿಡುಗಡೆಯಾಗಿತ್ತು. ಟೀಸರ್ ಗೇ ಈ ಪರಿ ವೀಕ್ಷಣೆ ಕಂಡು ಚಿತ್ರತಂಡ ಸಹಜವಾಗಿಯೇ ಖುಷಿಯಾಗಿದೆ. ನಟ ಶ್ರೀಮುರಳಿ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.