Select Your Language

Notifications

webdunia
webdunia
webdunia
webdunia

ಕುವೆಂಪು ಜನ್ಮಸ್ಥಳದಲ್ಲಿ ಪತಿಯ ಜೊತೆ ಪೂಜಾ ಗಾಂಧಿ

ಕುವೆಂಪು ಜನ್ಮಸ್ಥಳದಲ್ಲಿ ಪತಿಯ ಜೊತೆ ಪೂಜಾ ಗಾಂಧಿ
ಬೆಂಗಳೂರು , ಬುಧವಾರ, 6 ಡಿಸೆಂಬರ್ 2023 (13:46 IST)
Photo Courtesy: Twitter
ಬೆಂಗಳೂರು: ಎಲ್ಲಾ ಸಿನಿ ಕಲಾವಿದರು ಮದುವೆಯಾದ ಬಳಿಕ ವಿದೇಶದಲ್ಲಿ ಹನಿಮೂನ್ ಗೆಂದು ವಿಮಾನವೇರುತ್ತಾರೆ. ಆದರೆ ನಟಿ ಪೂಜಾ ಗಾಂಧಿ ಮಾತ್ರ ಎಲ್ಲರಿಗಿಂತ ಭಿನ್ನ ಎಂದು ತೋರಿಸಿದ್ದಾರೆ.

ಇತ್ತೀಚೆಗಷ್ಟೇ ಉದ್ಯಮಿ ವಿಜಯ್ ಜೊತೆ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಿದ್ದ ಪೂಜಾ ಗಾಂಧಿ ಈಗ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ. ಕುವೆಂಪು ಆಶಯದಂತೆ ಮದುವೆಯಾಗಿದ್ದಲ್ಲದೆ, ಕುವೆಂಪು ಅವರ ಜನ್ಮ ಸ್ಥಳಕ್ಕೇ ಪತಿ ಜೊತೆ ಭೇಟಿ ನೀಡಿದ್ದಾರೆ.

ನವಂಬರ್ 29 ರಂದು ಸಿಂಪಲ್ ಆಗಿ ಮಳೆ ಹುಡುಗಿ ಪೂಜಾ ಯಲಹಂಕದಲ್ಲಿ ಮದುವೆಯಾಗಿದ್ದರು. ಮದುವೆಗೆ ತಮ್ಮ ಆಪ್ತೇಷ್ಟರಿಗೆ ಮಾತ್ರ ಕರೆ ನೀಡಿದ್ದರು. ಅದರಂತೆ ಸ್ಯಾಂಡಲ್ ವುಡ್ ಸ್ನೇಹಿತರು ಮದುವೆಯಲ್ಲಿ ಭಾಗಿಯಾಗಿದ್ದರು.

ಇದೀಗ ಮದುವೆ ನಂತರ ಪತಿ ಜೊತೆ ಕುವೆಂಪು ಹುಟ್ಟಿ ಬೆಳೆದ ಜಾಗಕ್ಕೆ ಭೇಟಿ ಕೊಡುವ ಮೂಲಕ ತಮ್ಮ ಕನ್ನಡ ಪ್ರೀತಿಯನ್ನು ಮತ್ತೊಮ್ಮೆ ಜಾಹೀರು ಮಾಡಿದ್ದಾರೆ. ಅವರ ಈ ನಡೆಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ‘ಡಂಕಿ’ ಸಿನಿಮಾಗೆ ಈಗ ಸಲಾರ್ ಭಯ ಶುರು!