Select Your Language

Notifications

webdunia
webdunia
webdunia
webdunia

Pooja Gandhi: ಕುವೆಂಪು ಆಶಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪೂಜಾ ಗಾಂಧಿ

Pooja Gandhi: ಕುವೆಂಪು ಆಶಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪೂಜಾ ಗಾಂಧಿ
ಬೆಂಗಳೂರು , ಬುಧವಾರ, 29 ನವೆಂಬರ್ 2023 (20:58 IST)
Photo Courtesy: Twitter
ಬೆಂಗಳೂರು: ಮುಂಗಾರು ಮಳೆ ಮೂಲಕ ಕನ್ನಡಿಗರ ಹೃದಯ ಗೆದ್ದ ನಟಿ ಪೂಜಾ ಗಾಂಧಿ ಇಂದು ತಮ್ಮ ಗೆಳೆಯ ವಿಜಯ್ ಘೋರ್ಪಡೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗೋಧೂಳಿ ಮುಹೂರ್ತದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯ ಕ್ರಮದಲ್ಲಿ ಇಬ್ಬರೂ ಸರಳವಾಗಿ ವಿವಾಹವಾದರು. ಪರಸ್ಪರ ಹಾರ ಬದಲಾಯಿಸಿ ಮಂತ್ರ ಘೋಷಗಳಿಲ್ಲದೇ ಜೊತೆಯಾಗಿರುವುದಾಗಿ ವಾಗ್ಧಾನ ಮಾಡಿಕೊಂಡರು.

ನಿನ್ನೆಯಷ್ಟೇ ಪೂಜಾ ವಿವಾಹವಾಗುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದರು. ಇಂದು ಆಪ್ತರು, ಸಿನಿ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮದುವೆಗೆ ಸ್ಯಾಂಡಲ್ ವುಡ್ ನಿರ್ದೇಶಕ ಯೋಗರಾಜ್ ಭಟ್, ನಟಿ ಸುಧಾರಾಣಿ, ಶುಭಾ ಪೂಂಜ ಸೇರಿದಂತೆ ಕೆಲವೇ ಆಪ್ತರು ಆಗಮಿಸಿದ್ದರು.

ಇನ್ನು ಮದುವೆ ಸಮಾರಂಭದ ಫೋಟೋ ಸೆರೆಹಿಡಿಯಲು ಮಾಧ್ಯಮಗಳಿಗೆ ಅವಕಾಶ ನೀಡಲಾಗಿಲ್ಲ. ತಾವೇ ಫೋಟೋ, ವಿಡಿಯೋ ಬಿಡುಗಡೆ ಮಾಡುವುದಾಗಿ ಪೂಜಾ ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ದರ್ಶನ್ ಕಾಟೇರ ಸಿನಿಮಾ ರಿಲೀಸ್ ದಿನಾಂಕ ಪ್ರಕಟ