Publish Date: Tue, 28 Nov 2023 (08:20 IST)
Updated Date: Tue, 28 Nov 2023 (08:56 IST)
ಬೆಂಗಳೂರು: ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮನಕದ್ದಿದ್ದ ಪಂಜಾಬಿ ಬೆಡಗಿ ಪೂಜಾ ಗಾಂಧಿಗೆ ಈಗ ಕಂಕಣ ಭಾಗ್ಯ ಕೂಡಿಬಂದಿದೆ.
ಪೂಜಾ ಗಾಂಧಿ ಮುಂಗಾರು ಮಳೆ ಸಿನಿಮಾದಲ್ಲಿ ಅಭಿನಯಿಸಿದ ಮೇಲೆ ಹಲವು ಸಿನಿಮಾಗಳನ್ನು ಕನ್ನಡದಲ್ಲಿಯೇ ಮಾಡಿದ್ದರು. ಅದಾದ ಬಳಿಕ ಅವರು ಕನ್ನಡತಿಯೇ ಆಗಿದ್ದಾರೆ. ಇತ್ತೀಚೆಗೆ ಕನ್ನಡ ಕೂಡಾ ಬರೆಯಲೂ ಕಲಿತಿದ್ದಾರೆ.
ಇದೀಗ ಅವರು ಮದುವೆಯಾಗುತ್ತಿರುವ ಸುದ್ದಿ ಕೇಳಿಬಂದಿದೆ. ಪೂಜಾ ಉದ್ಯಮಿ ವಿಜಯ್ ಎಂಬವರ ಜೊತೆ ಪೂಜಾ ವಿವಾಹವಾಗಲಿದ್ದಾರೆ. ವಿಜಯ್ ಲಾಜಿಸ್ಟಿಕ್ ಕಂಪನಿಯೊಂದರ ಮಾಲಿಕರಾಗಿದ್ದು, ಪೂಜಾಗೆ ಕನ್ನಡ ಕಲಿಸಿದ್ದು ಇವರೇ ಎನ್ನಲಾಗಿದೆ.
ಇದೀಗ ಕನ್ನಡ ಕಲಿಸಿದ ಸ್ನೇಹಿತನನ್ನೇ ಮದುವೆಯಾಗಲಿದ್ದಾರೆ. ನವಂಬರ್ 29 ರಂದು ಬೆಂಗಳೂರಿನಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ. ಆದರೆ ಈ ಬಗ್ಗೆ ನಟಿ ಕಡೆಯಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ.