ಈಗ ಬಂದಿರುವ ಹೊಸ ಸುದ್ದಿ ಏನೆಂದರೆ ಪೂಜಾ ಗಾಂಧಿಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಆತ ಸಿನಿಮಾ ರಂಗದವನಲ್ಲ ಅನ್ನೋದೇ ಇಲ್ಲಿ ಮುಖ್ಯ. ಆಕೆ ಆತನೊಂದಿಗೆ ಕಾಲ ಕಳೆದ ಬಗ್ಗೆ ಸುದ್ದಿ ಹರಡಿದೆ.
ಒಟ್ಟಾರೆ ಮೊಟ್ಟ ಮೊದಲ ಬಾರಿ ಸಿನಿಮಾ ಮಂದಿಯ ಸಹವಾಸ ಸಾಕು ಎಂದು ಆಕೆ ನಿರ್ಧರಿಸಿದಂತಿದೆ. ಅದು ಒಳ್ಳೆಯದೇ ಒಂದು ರೀತಿ. ಅನಗತ್ಯ ಸುದ್ದಿ ಹರಡುವ ಮಂದಿಗಿಂತ ಉತ್ತಮ ಸ್ನೇಹ ಹಾಗೂ ಬಾಳು ನೀಡುವವರು ಬದುಕಿಗೆ ಬೇಕು.. ಪೂಜಾ ನಿರ್ಧಾರ ಹೆಚ್ಚು ಕಾಲ ದೃಢವಾಗಿರಲಿ.
ಸ್ಯಾಂಡಲ್‌ವುಡ್ ನಲ್ಲಿ ನಟಿ ಪೂಜಾಗಾಂಧಿ ಬಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ಆಕೆ ಬಗ್ಗೆ ಹರಡುವ ಸುದ್ದಿಗಳು ಸಾಮಾನ್ಯವಾಗಿ ಪ್ರಣಯ ಕಥೆಯ ಲಿಂಕ್ ಹೊಂದಿರುತ್ತದೆ ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಆಕೆಯ ಎಂಗೇಜ್ ಮೆಂಟ್ ಮುರಿದು ಬಿದ್ದ ಬಳಿಕ ಪೂಜಾ ಇಂತಹವರ ಜೊತೆ ಅಂತಹವರ ಜೊತೆ ಇಲ್ಲಿ, ಅಲ್ಲಿ ಓಡಾಡುತ್ತಿದ್ದಾಳೆ ಎನ್ನುವ ಸುದ್ದಿ ಹರಡಿತ್ತು. ಆದರೆ ಅದೆಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಪೂಜಾ ಹೇಳ ಬೇಕಿತ್ತು. ಆ ವಿಷಯದಲ್ಲಿ ಆಕೆ ಎಂದಿಗೂ ಸ್ಪಷ್ಟನೆ ನೀಡುವುದಕ್ಕೆ ಹೋಗಿರಲಿಲ್ಲ.