Publish Date: Tue, 21 Nov 2023 (10:20 IST)
Updated Date: Tue, 21 Nov 2023 (10:21 IST)
ಬೆಂಗಳೂರು: ಕಾಂತಾರ 2 ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಈಗಾಗಲೇ ಹರಿದಾಡುತ್ತಿದೆ. ಅದರ ನಡುವೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ 2 ಬಗ್ಗೆ ಭಾರೀ ನಿರೀಕ್ಷೆಯಿದೆ. ಕಾಂತಾರ 1 ಯಶಸ್ವಿಯಾಗಿದ್ದೇ ಇದಕ್ಕೆ ಕಾರಣ. ಪರಭಾಷಿಗರೂ ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಎದಿರು ನೋಡುತ್ತಿದ್ದಾರೆ. ಈ ನಡುವೆ ನವಂಬರ್ 27 ರಂದು ಚಿತ್ರಕ್ಕೆ ಚಾಲನೆ ಸಿಗಲಿದೆ ಎಂಬ ಮಾತು ಕೇಳಿಬಂದಿತ್ತು.
ಆದರೆ ಅದಕ್ಕೆ ಮೊದಲು ಚಿತ್ರತಂಡ ಗುಳಿಗ ಮತ್ತು ಪಂಜುರ್ಲಿ ದೈವದ ಒಪ್ಪಿಗೆ ಪಡೆದಿದೆಯಂತೆ. ದೈವದ ಒಪ್ಪಿಗೆಯೊಂದಿಗೇ ಚಿತ್ರೀಕರಣ ಪ್ರಾರಂಭಿಸಲು ರಿಷಬ್ ಆಂಡ್ ಟೀಂ ನಿರ್ಧರಿಸಿದ್ದಾರೆ.
ಇದಕ್ಕೆ ಮೊದಲು ಕಾಂತಾರ 2 ಚಿತ್ರ ಮಾಡಬಹುದೇ ಎಂಬುದನ್ನೂ ರಿಷಬ್ ದೈವದ ಬಳಿ ಪ್ರಶ್ನೆ ಮಾಡಿದ್ದರು. ದೈವದ ಒಪ್ಪಿಗೆ ಸಿಕ್ಕ ನಂತರವಷ್ಟೇ ಕಾಂತಾರ 2 ಸಿನಿಮಾಗೆ ಚಾಲನೆ ನೀಡಲು ನಿರ್ಧರಿಸಿದ್ದರು.