ಬೆಂಗಳೂರು: ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ನಾಳೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಅವರು ಮಾಧ್ಯಮಗಳಿಗೆ ಮದುವೆಯ ಕರೆಯೋಲೆ ನೀಡಿದ್ದಾರೆ.
ಆದರೆ ಮದುವೆ ಕರೆಯೋಲೆ ಜೊತೆ ಮಾಧ‍್ಯಮಗಳಿಗೆ ಷರತ್ತೊಂದನ್ನೂ ವಿಧಿಸಿದ್ದಾರೆ. ಅದೇನೆಂದರೆ ತಮ್ಮ ಮದುವೆಗೆ ಬರುವವರು ಯಾರೂ ಫೋಟೋ, ವಿಡಿಯೋ ಸೆರೆಹಿಡಿಯಲು ಕ್ಯಾಮರಾ ತರುವಂತಿಲ್ಲ. ಬೇಕಾದಷ್ಟು ಫೋಟೋಗಳನ್ನು ನಾನೇ ನಿಮಗೆಲ್ಲಾ ಕಳುಹಿಸಿಕೊಡುತ್ತೇನೆ ಎಂದು ಮಾಧ‍್ಯಮಗಳಿಗೆ ನಿರ್ಬಂಧ ವಿಧಿಸಿದ್ದಾರೆ.
ಲಾಜಿಸ್ಟಿಕ್ ಕಂಪನಿಯೊಂದರ ಮಾಲಿಕ ವಿಜಯ್ ಘೋರ್ಪಡೆಯವರೊಂದಿಗೆ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗುತ್ತಿರುವುದಾಗಿ ಪೂಜಾ ತಿಳಿಸಿದ್ದಾರೆ.
ವಿಶೇಷವೆಂದರೆ ಮಾಧ‍್ಯಮಗಳಿಗೆ ಕನ್ನಡದಲ್ಲೇ ಪತ್ರ ಬರೆದು ಮದುವೆಗೆ ಕರೆಯೋಲೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು ಕನ್ನಡ ಬರೆಯಲೂ ಕಲಿತಿದ್ದರು. ಪಂಜಾಬಿ ಮೂಲದವರಾದರೂ ಕನ್ನಡ ಕಲಿತು ಕನ್ನಡಿಗರೇ ಆಗಿದ್ದಾರೆ.