Publish Date: Thu, 30 Nov 2023 (14:40 IST)
Updated Date: Thu, 30 Nov 2023 (13:37 IST)
ಮಳೆ ಹುಡುಗಿ ಪೂಜಾ ಗಾಂಧಿ ಮದುವೆ ಯಲಹಂಕ ಬಳಿ ಖಾಸಗಿ ರೆಸಾರ್ಟ್ ನಲ್ಲಿ ನಡೆಯುತ್ತಿದೆ.ಉದ್ಯಮಿ ವಿಜಯ್ ಘೋರ್ಪಡೆ ಎಂಬುವರನ್ನ ಪೂಜಾಗಾಂಧಿ ವಿವಾಹವಾಗ್ತಿದ್ದು,ಮಂತ್ರಮಾಂಗಲ್ಯ ಪದ್ಧತಿಯ ಮೂಲಕ ದಾಂಪತ್ಯ ಜೀವನಕ್ಕೆ ಪೂಜಾ ಗಾಂಧಿ ಕಾಲಿಡ್ತಿದ್ದಾರೆ.
ಕೆಲವೇ ಕೆಲವು ಸಿನಿಮಾ ಗಣ್ಯರು - ರಾಜಕೀಯ ಮುಖಂಡರ ಆಗಮನದ ನಿರೀಕ್ಷೆ ಇದೆ.ಪಂಜಾಬ್ ಮೂಲದ ಹುಡುಗಿ ಪೂಜಾ ಗಾಂಧಿ ಮುಂಗಾರು ಮಳೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ರು.ಹಲವು ವರ್ಷಗಳಿಂದ ಕನ್ನಡಿಗರೇ ಆಗಿದ್ದ ಪೂಜಾ. ಈಗ ಕನ್ನಡದ ಸೊಸೆಯಾಗಿದ್ದಾರೆ.
ಹಲವು ವರ್ಷಗಳಿಂದ ತಮ್ಮ ಕನ್ನಡಾಭಿಮಾನದಿಂದ ಕನ್ನಡಿಗರ ಮನಗೆದ್ದಿದ್ದರು.ಈಗ ಕನ್ನಡಿಗ ವಿಜಯ್ ಅವರನ್ನ ವರಿಸುವ ಮೂಲಕ ಕರ್ನಾಟಕದ ಸೊಸೆ ಆಗ್ತಿದ್ದಾರೆ.ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಂತೆ ನಡೆಯಲಿದೆ ಮಳೆ ಹುಡುಗಿ ಪೂಜಾ ಗಾಂಧಿ ವಿವಾಹವಾಗಿದೆ.