Select Your Language

Notifications

webdunia
webdunia
webdunia
webdunia

ನಾನು ಪಟ್ಟ ಕಷ್ಟ ನನಗೊಬ್ಬನಿಗೇ ಗೊತ್ತು ಎಂದ ರಣಬೀರ್ ಕಪೂರ್

ನಾನು ಪಟ್ಟ ಕಷ್ಟ ನನಗೊಬ್ಬನಿಗೇ ಗೊತ್ತು ಎಂದ ರಣಬೀರ್ ಕಪೂರ್
mumbai , ಗುರುವಾರ, 30 ನವೆಂಬರ್ 2023 (11:50 IST)
ರಿಷಿ ಕಪೂರ್ ಹಾಗೂ ನೀತು ಸಿಂಗ್ ಪುತ್ರರಾದ ರಣಬೀರ್ ನನ್ನನ್ನು ಜನ ನನ್ನ ಕೆಲಸದಿಂದ ಗುರುತಿಸುವಂತಾಗಬೇಕು. ನನ್ನ ಕೌಟುಂಬಿಕ ಹಿನ್ನೆಲೆಯಿಂದ ಅವಕಾಶಗಳು ವಿಫುಲವಾಗಿ ಸಿಗುತ್ತಿವೆ ಎಂದು ಜನ ಅಂದುಕೊಂಡಿದ್ದಾರೆ. ಮೊದಲ ಚಿತ್ರದ ನಂತರ ನಾನು ಪಟ್ಟ ಕಷ್ಟ ನನಗೊಬ್ಬನಿಗೇ ಗೊತ್ತು ಎಂದಿದ್ದಾರೆ ರಣಬೀರ್. 
 
ಇತ್ತೀಚೆಗೆ ನಿಭಾಯಿಸುತ್ತಿರುವ ಪಾತ್ರಗಳು ನನಗೆ ಹೊಸ ಪಾಠ ಕಲಿಸುತ್ತಿವೆ. ಸ್ಟಾರ್ಡಮ್ ಕಳೆಗುಂದುತ್ತದೆ, ನಟ ಮಾತ್ರ ಬದುಕಿರುತ್ತಾನೆ, ಈ ವಯಸ್ಸಿನಲ್ಲೂ  ಅಷ್ಟೊಂದು ಉತ್ಸಾಹದಿಂದ ಪಾತ್ರಗಳಲ್ಲಿ ಒಂದಾಗುವುದನ್ನು ಕಂಡರೆ ನನಗೆ ಅಚ್ಚರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ ನಟ ರಣಬೀರ್ ಕಪೂರ್.
 
ಸಿನೆಮಾ ಸ್ಟಾರ್ಗಳಿಗೆ ಇಂತಹ ಹುಚ್ಚಾಟ ಇರುವುದು ಕಡಿಮೆ. ಏಕೆಂದರೆ ಹಲವಾರು ಚಿತ್ರಗಳಲ್ಲಿ ನಟಿಸುತ್ತಲೇ ಪ್ರಸಿದ್ಧಿ ಅವರ ಬೆನ್ನಟ್ಟಿ ಬಂದಿರುತ್ತದೆ. ಆದರೆ ಈಗ ರಣಬೀರ್ ಇಂತಹ ಭಾವನೆ ಬಲವಾಗಿ ಕಾಡುತ್ತಿದೆಯಂತೆ. 
 
ನನ್ನನ್ನು ಎಲ್ಲರೂ ಸ್ಟಾರ್ ನಟನ ಮಗನೆಂದು ಕರೆಯುವುದು ಬೇಡವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ನಾನು ಇನ್ನಷ್ಟು ಕಷ್ಟಪಟ್ಟು ದುಡಿದು ಅಪ್ಪ ಅಮ್ಮನ ನೆರಳಿನಿಂದ ಹೊರಬಂದು ಅವರಲ್ಲಿ ಹೆಮ್ಮ ಮೂಡಿಸಬೇಕೆಂಬ ಅಭಿಲಾಷೆಯನ್ನು ರಣಬೀರ್ ತೋಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಕಾರು ತಡೆದ ಪೊಲೀಸರು