Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ಕಾರು ತಡೆದ ಪೊಲೀಸರು

ರಿಷಬ್ ಶೆಟ್ಟಿ ಕಾರು ತಡೆದ ಪೊಲೀಸರು
ಬೆಂಗಳೂರು , ಗುರುವಾರ, 30 ನವೆಂಬರ್ 2023 (11:15 IST)
ಬೆಂಗಳೂರು: ಕಾಂತಾರ ಸಿನಿಮಾ ಮೂಲಕ ಇಡೀ ವಿಶ್ವದ ಗಮನ ಸೆಳೆದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾರನ್ನು ತಪಾಸಣೆಗಾಗಿ ಪೊಲೀಸರು ತಡೆದ ಘಟನೆ ನಡೆದಿದೆ.
 

ಗೋವಾದಲ್ಲಿ ನಡೆದ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದ ರಿಷಬ್ ಕಾರವಾರ ಮಾರ್ಗವಾಗಿ ತವರಿಗೆ ವಾಪಸಾಗುತ್ತಿದ್ದರು. ಈ ವೇಳೆ ಪೊಲೀಸರು ತಪಾಸಣೆಗಾಗಿ ಕಾರು ತಡೆದಿದ್ದಾರೆ.

ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಕಾರನ್ನು ತಡೆದಿದ್ದಾರೆ. ಅವರಿಗೆ ಆ ಕಾರಿನಲ್ಲಿದ್ದಿದ್ದು ರಿಷಬ್ ಶೆಟ್ಟಿ ಎಂದು ಗೊತ್ತಿರಲಿಲ್ಲ. ಎಂದಿನಂತೆ ಕಾರನ್ನು ತಡೆದಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ರಿಷಬ್ ಶೆಟ್ಟಿಯನ್ನು ನೋಡಿ ಪೊಲೀಸರೂ ಖುಷಿಯಾದರು. ಅವರನ್ನು ಮಾತನಾಡಿಸಿದ್ದಲ್ಲದೆ, ಫೋಟೋ ತೆಗೆಸಿಕೊಂಡು ಕಳುಹಿಸಿಕೊಟ್ಟರು. ದಿನನಿತ್ಯದಂತೆ ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಚಾಪ್ಟರ್ 1 ಕತೆ ಬಗ್ಗೆ ಶುರುವಾಯ್ತು ಚರ್ಚೆ: ಕಾಂತಾರ ಕತೆ ಇದೇನಾ?