ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ರ ಮುಹೂರ್ತ ಕಾರ್ಯಕ್ರಮ ನಿನ್ನೆ ನೆರವೇರಿದೆ. ಅದರ ಜೊತೆಗೆ ಚಿತ್ರತಂಡ ಫಸ್ಟ್ ಲುಕ್ ಟೀಸರ್ ಕೂಡಾ ಬಿಡುಗಡೆ ಮಾಡಿದೆ.
ಟೀಸರ್ ನಲ್ಲಿ ರಕ್ತಸಿಕ್ತ ಕೈಯಲ್ಲಿ ಖಡ್ಗ, ತ್ರಿಶೂಲ ಹಿಡಿದು ನಿಂತಿರುವ ರಿಷಬ್ ಶೆಟ್ಟಿಯ ರೌದ್ರಾವತಾರವಿದೆ. ಜೊತೆಗೆ ಟೀಸರ್ ನಲ್ಲಿ ಲೆಜೆಂಡ್ ಈಸ್ ಬಾರ್ನ್ ಎಂದು ಅಡಿ ಬರಹ ನೀಡಲಾಗಿದೆ. ಹೀಗಾಗಿ ಈಗ ಕಾಂತಾರ ಚಾಪ್ಟರ್ 1 ರ ಕತೆಯೇನಿರಬಹುದು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಮೊದಲು ಬಂದ ಕಾಂತಾರ ಸಿನಿಮಾದಲ್ಲಿ ಗುಳಿಗ ಮತ್ತು ಪಂಜುರ್ಲಿ ದೈವದ ಕೋಲವನ್ನು ತೋರಿಸಲಾಗಿತ್ತು. ಕಾಡಿನಲ್ಲಿ ದೈವಗಳು ಮರೆಯಾಗುವ ವಿಚಿತ್ರ ಸಂಗತಿಯನ್ನು ತೋರಿಸಿ ಪ್ರೇಕ್ಷಕರ ತಲೆಯಲ್ಲಿ ಅನುಮಾನ ಹುಟ್ಟುಹಾಕಲಾಗಿತ್ತು.
ಇದೀಗ ಕಾಂತಾರ ಅಧ್ಯಾಯ 1 ರಲ್ಲಿ ಮುನ್ನುಡಿ ಹೇಳಲಾಗುತ್ತದೆ. ಅಂದರೆ ಗುಳಿಗ ದೈವದ ಬಗ್ಗೆಯೇ ರಿಷಬ್ ಕತೆ ಹೇಳಲಿದ್ದಾರೆ ಎಂದು ಊಹಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಗುಳಿಗ ದೈವ ಎಂದರೆ ಭೀಭತ್ಸದ ರೂಪ. ಸದಾ ಕೈಯಲ್ಲಿ ತ್ರಿಶೂಲವನ್ನು ಆಯುಧವಾಗಿ ಹಿಡಿದಿರುತ್ತದೆ ಎಂಬ ನಂಬಿಕೆಯಿದೆ.