Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆಯೊಂದಿಗೆ ನಟಿಸುವುದು ತುಂಬಾನೇ ಇಷ್ಟ ಎಂದ ರಣಬೀರ ಕಪೂರ್

Ranbir Kapoor
mumbai , ಬುಧವಾರ, 29 ನವೆಂಬರ್ 2023 (08:18 IST)
ನಾನು ದೀಪಿಕಾ ಪಡುಕೋಣೆ ಅವರ ಜೊತೆ ಅಭಿನಯಿಸಲು ಇಷ್ಟಪಡುತ್ತೇನೆ. ಅದಕ್ಕೆ ಕಾರಣ ಅವರ ಜೊತೆ ಅಭಿನಯಿಸೋದು ತುಂಬಾನೇ ಕಂಫರ್ಟ್ ಆಗಿರುತ್ತೆ ಅಂತಾ ಬಾಲಿವುಡ ಖ್ಯಾತ ನಟ ರಣ್ ಬೀರ್ ಕಪೂರ್ ಹೇಳಿದ್ದಾರೆ. 
 
ನಾನು ಯಾವಾಗ ಅವಳ ಜೊತೆ ಇರುತ್ತೇನೋ ಆಗ ನನಗೆ ಮನೆಗೆ ಬರಳಿ ಬಂದ ಖುಷಿಯಾಗುತ್ತೆ ಅಂತಾ ಅವರು ಹೇಳಿದ್ದಾರೆ. ಅಲ್ಲದೇ ಆಕೆ ನನ್ನ ಅನ್ನ ದಾಲ್ ಇದ್ದಂತೆ ಅಂತಾ ಅವರು ದೀಪಿಕಾ ಗುಣಗಾನ ಮಾಡಿದ್ದಾರೆ.
 
ದೀಪಿಕಾ ಹಾಗೂ ರಣ್ ಬೀರ್ ಬ್ರೇಕ್ ಆಪ್ ಆದ ಬಳಿಕ ಅಭಿನಯಿಸುತ್ತಿರುವ  ಸಿನಿಮಾ ಇದಾಗಿದ್ದು ದೀಪಿಕಾ ಹಾಗೂ ರಣ್ ಬೀರ್ ಇಬ್ಬರ ನೆಚ್ಚಿನ ನಿರ್ದೇಶಕ  ಸಿನಿಮಾವನ್ನು ನಿರ್ದೇಶಿಸಿದ್ದಾರೆ. 
 
ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ ಬೀರ್ ಕಪೂರ್ ಸಿನಿಮಾದ ಪ್ರಮೋಷನ್ ಗಾಗಿ ದೆಹಲಿಯಲ್ಲಿ ದೀಪಾವಳಿ ಹಬ್ಬವನ್ನು ಜೊತೆಯಾಗಿ ಆಚರಿಸಿದ್ರು. ಮಾಜಿ ಪ್ರೇಮಿಗಳಿಬ್ಬರು ಜೊತೆಯಾಗಿ ದೀಪಾವಳಿ ಆಚರಿಸಿರೋದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿನೋದ್ ರಾಜ್ ಗೆ ಧೈರ್ಯ ತುಂಬಿದ ಶಿವಣ್ಣ