Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್‌ ಬಂಧಿಸಲು ಬೆಡ್‌ರೂಂಗೆ ನುಗ್ಗಿದ ಪೊಲೀಸರು: ದಿಸ್ ಈಸ್ ಟೂ ಮಚ್ ಎಂದು ನಟ ಗರಂ

Tollywood Star Allu Arjun

Sampriya

ಹೈದರಾಬಾದ್‌ , ಶುಕ್ರವಾರ, 13 ಡಿಸೆಂಬರ್ 2024 (15:03 IST)
Photo Courtesy X
ಹೈದರಾಬಾದ್‌: ಟಾಲಿವುಡ್‌ ಸ್ಟಾರ್‌ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅವರು ಬೆಡ್‌ರೂಂನಿಂದಲೇ ಬಂಧಿಸಲಾಗಿದೆ ಎನ್ನಲಾಗಿದೆ.

ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿಂತೆ ಬೆಡ್‌ರೂಮ್‌ಗೆ ನುಗ್ಗಿ ಅಲ್ಲು ಅರ್ಜುನ್‌ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ ವಿಡಿಯೋವೊಂದು ವೈರಲ್‌ ಆಗಿದೆ. ಈ ವೀಡಿಯೋನಲ್ಲಿ ಪೊಲೀಸರು ತಮ್ಮನ್ನು ಬಂಧಿಸಿದ ರೀತಿಗೆ ನಟ ಅಸಮಾಧಾನ ಹೊರಹಾಕಿದ್ದಾರೆ.

ಪೊಲೀಸರಿಗೆ ಸಹಕರಿಸಲು ಸಿದ್ಧನಿರುವಾಗ ಬೆಡ್‌ರೂಮ್‌ಗೆ ನುಗ್ಗುವ ಅವಶ್ಯಕತೆ ಏನಿತ್ತು. ನಾನು ಬೆಡ್‌ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿದ್ದೆ. ಹೊರಗಡೆ ಬಂದು ಕರೆದಿದ್ದರೆ ನಾಳೆ ಬರುತ್ತಿದೆ. ನೀವು ಕರೆದುಕೊಂಡು ಹೋಗಿದ್ದು ತಪ್ಪಲ್ಲ. ಆದ್ರೆ ಬೆಡ್ ರೂಮ್ ಹತ್ರ ಬಂದಿರೋದು ತಪ್ಪು. ದಿಸ್ ಈಸ್ ಟೂ ಮಚ್, ಇದು ಒಳ್ಳೇದು ಅಲ್ಲ ಸರ್ ಎಂದು ಅಸಮಾಧಾನ ಹೊರಹಾಕಿದ್ದಾರೆ.  

ಸದ್ಯ ಅಲ್ಲು ಅರ್ಜುನ್‌ನನ್ನು ಬಂಧಿಸಿರುವ ಪೊಲೀಸರು ಮೆಡಿಕಲ್‌ ಟೆಸ್ಟ್‌ಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ನಾಂಪಲ್ಲಿ ಕೋರ್ಟ್‌ಗೆ ಹಾಜರು ಪಡಿಸಲು ಪೊಲೀಸರ ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

Allu Arjun arrested: ಅಲ್ಲು ಅರ್ಜುನ್ ರನ್ನು ಪೊಲೀಸರು ಪ್ಲ್ಯಾನ್ ಮಾಡಿ ಇಂದೇ ಅರೆಸ್ಟ್ ಮಾಡಿದ್ರಾ