ಬೆಂಗಳೂರು: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಪವಿತ್ರಾ ಸ್ನಾನ ಮಾಡಿದ್ದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದರಿಂದ ಪಾಪ ಪರಿಹಾರವಾಗುವುದು ಎಂಬ ನಂಬಿಕೆಯಿದೆ. ಅದರಲ್ಲೂ ಮೌನಿ ಅಮವಾಸ್ಯೆಯಂದು ಪುಣ್ಯಸ್ನಾನ ಮಾಡುವುದು ವಿಶೇಷವಾಗಿದೆ.
ಈಗ ಪವಿತ್ರಾ ಗೌಡ ಕೂಡಾ ಮೌನಿ ಅಮವಾಸ್ಯೆಯಂದು ಪವಿತ್ರ ಸ್ನಾನ ಮಾಡಿದ್ದಾರೆ. ಗಂಗಾನದಿಯಲ್ಲಿ ಬೋಟಿಂಗ್ ಮಾಡುವ ವಿಡಿಯೋವನ್ನು ಪ್ರಕಟಿಸಿರುವ ಪವಿತ್ರಾ ಗೌಡ ಮೌನಿ ಅಮವಾಸ್ಯೆಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕ ನಾನೇ ಧನ್ಯಳು ಎಂದು ಬರೆದುಕೊಂಡಿದ್ದಾರೆ.
ಅವರ ಈ ಪೋಸ್ಟ್ ಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಅಂತೂ ಈ ಮೂಲಕ ಒಬ್ಬ ಕಾಮುಕನ ಕೊಂದ ಪಾಪ ಪರಿಹಾರ ಮಾಡಿಕೊಂಡಿರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದಯವಿಟ್ಟು ಇನ್ನಾದ್ರೂ ಡಿ ಬಾಸ್ ಲೈಫ್ ನಿಂದ ದೂರವಾಗಿ, ನಿಮ್ಮದೇ ಬದುಕು ಕಟ್ಟಿಕೊಳ್ಳಿ ಎಂದಿದ್ದಾರೆ. ಇನ್ನು ಕೆಲವರು ನಿಮ್ಮ ಮುಂದಿನ ಬದುಕಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.