Publish Date: Fri, 04 Dec 2020 (09:51 IST)
Updated Date: Fri, 04 Dec 2020 (10:05 IST)
ಹೈದರಾಬಾದ್: ನಿರ್ದೇಶಕ ಎ.ಆರ್.ಮುರುಗದಾಸ್ ಅವರು ದಕ್ಷಿಣ ಸಿನಿಮಾರಂಗದ ಖ್ಯಾತ ನಿರ್ದೇಶಕ. ಇವರು ಹಾಲಿವುಡ್ ಸಿನಿಮಾಗಳನ್ನು ಮಾಡಬಲ್ಲ ಪ್ರತಿಭಾವಂತ ನಿರ್ದೇಶಕರೆಂದೆ ಪ್ರಸಿದ್ಧರಾಗಿದ್ದಾರೆ.
ಇಂತಹ ನಿರ್ದೇಶಕರಿಗೆ ಇದೀಗ ಹಾಲಿವುಡ್ ನಿಂದ ಆಫರ್ ಬಂದಿದೆ ಎಂಬ ವದಂತಿ ಕಾಲಿವುಡ್ ವಲಯದಲ್ಲಿ. ಕೇಳಿಬರುತ್ತಿದೆ. ಮುರುಗದಾಸ್ ಅವರು ಪ್ರಸ್ತುತ ತಮ್ಮ ಮೊದಲ ಹಾಲಿವುಡ್ ಚಿತ್ರಕ್ಕಾಗಿ ಹಾಲಿವುಡ್ ಪ್ರಸಿದ್ಧ ಸ್ಟುಡಿಯೋ ಡಿಸ್ನಿ ಪಿಕ್ಚರ್ಸ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಮುರುಗದಾಸ್ ಅವರು ದಕ್ಷಿಣದಿಂದ ಹಾಲಿವುಡ್ ಚಿತ್ರವನ್ನು ನಿರ್ದೇಶಿಸಿದ ಮೊದಲ ಶ್ರೇಷ್ಠ ನಿರ್ದೇಶಕರಾಗಲಿದ್ದಾರೆ ಎನ್ನಲಾಗಿದೆ.