Publish Date: Fri, 04 Dec 2020 (09:37 IST)
Updated Date: Fri, 04 Dec 2020 (09:40 IST)
ಬೆಂಗಳೂರು: ರಾಬರ್ಟ್ ಸಿನಿಮಾದ ವಿನೋದ್ ಪ್ರಭಾಕರ್ ಲುಕ್ ನಿನ್ನೆ ಲಾಂಚ್ ಆಗಿತ್ತು. ಇದರ ಬಗ್ಗೆ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ವಿನೋದ್ ಪ್ರಭಾಕರ್ ಲುಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಜಗ್ಗೇಶ್ ಥೇಟ್ ಅವರ ಅಪ್ಪನಂತೇ ಕಾಣುತ್ತಿದ್ದಾನೆ ಎಂದು ಟೈಗರ್ ಪ್ರಭಾಕರ್ ಅವರನ್ನು ನೆನೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಟೈಗರ್ ಪ್ರಭಾಕರ್ ಹೃದಯದಲ್ಲಿ ನನಗೆ ತಾಯಿ ಪ್ರೀತಿ ಇತ್ತು. ನಾವು ಚೆನ್ನಾಗಿದ್ರೆ ಎಲ್ರೂ ಬರ್ತಾರೆ. ನಾವೇನಾದ್ರೂ ಡೌನ್ ಆಯ್ತು ಅಂದ್ರೆ ಮುಗೀತು ಕತೆ. ದುಡ್ಡು ಉಷಾರಾಗಿ ಇಟ್ಕೋ. ಯಾಕಂದರೆ ದುಡ್ಡಿದ್ರೇ ದುನಿಯಾ ಅಂತಿದ್ರು ಎಂದು ಜಗ್ಗೇಶ್ ಟೈಗರ್ ಪ್ರಭಾಕರ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
Krishnaveni K
Publish Date: Fri, 04 Dec 2020 (09:37 IST)
Updated Date: Fri, 04 Dec 2020 (09:40 IST)