Publish Date: Thu, 03 Dec 2020 (10:29 IST)
Updated Date: Thu, 03 Dec 2020 (10:30 IST)
ಬೆಂಗಳೂರು: ಕನ್ನಡ ನಿರ್ಮಾಪಕರು, ನಿರ್ದೇಶಕರು ತೆಲುಗು ಸ್ಟಾರ್ ನಟ ಪ್ರಭಾಸ್ ನಾಯಕರಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟಿರುವ ಬಗ್ಗೆ ಕೆಲವರು ಅಪಸ್ವರವೆತ್ತಿದ್ದಾರೆ. ಇಂತಹ ಟೀಕಾಕಾರರಿಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪರೋಕ್ಷ ತಿರುಗೇಟು ಕೊಟ್ಟಿದ್ದಾರೆ.
ಇದು ನಮಗೆಲ್ಲಾ ಹೆಮ್ಮೆಯ ವಿಷಯವಲ್ಲವೇ? ನಮ್ಮ ಸ್ಟುಡಿಯೋಗಳು ರಾಷ್ಟ್ರಮಟ್ಟದ ಸಿನಿಮಾ ನಿರ್ಮಾಣ ಮಾಡುವಷ್ಟು ಬೆಳೆದಿದೆ. ನಮ್ಮ ತಂತ್ರಜ್ಞರನ್ನು ಬೇರೆ ಭಾಷೆಯವರೂ ಸೆಳೆಯುತ್ತಿದ್ದಾರೆ. ಯಾವತ್ತೂ ಇಂತಹದ್ದೊಂದು ಕಾಣಬಹುದು ಅಂದುಕೊಂಡಿರಲಿಲ್ಲ. ಆದರೆ ಈ ರೀತಿಯೂ ಆಗಬಹುದು ಎಂಬ ನಂಬಿಕೆಯಿತ್ತು. ಹೊಂಬಾಳೆ ಫಿಲಂಸ್ ಗೆ ಗುಡ್ ಲಕ್ ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ.