Select Your Language

Notifications

webdunia
webdunia
webdunia
webdunia

ಪ್ರಭಾಸ್-ಪ್ರಶಾಂತ್ ನೀಲ್ ಸಿನಿಮಾ: ಇದನ್ನೇ ನಾನು ಹೇಳಿದ್ದು ಎಂದ ಜಗ್ಗೇಶ್

ಪ್ರಭಾಸ್-ಪ್ರಶಾಂತ್ ನೀಲ್ ಸಿನಿಮಾ: ಇದನ್ನೇ ನಾನು ಹೇಳಿದ್ದು ಎಂದ ಜಗ್ಗೇಶ್
ಬೆಂಗಳೂರು , ಗುರುವಾರ, 3 ಡಿಸೆಂಬರ್ 2020 (10:04 IST)
ಬೆಂಗಳೂರು: ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾವೊಂದು ಸೆಟ್ಟೇರುವ ಸುದ್ದಿ ಬರುತ್ತಿದ್ದಂತೇ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.


ಮೊನ್ನೆಯಷ್ಟೇ ಪ್ಯಾನ್ ಇಂಡಿಯಾ ಸಿನಿಮಾ ಟೀಕಿಸಿದ್ದಕ್ಕೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಯಶ್ ಅಭಿಮಾನಿಗಳಿಂದ ಟೀಕೆಗೊಳಗಾಗಿದ್ದರು. ಇದೀಗ ಕನ್ನಡದ ಹೊಂಬಾಳೆ ಫಿಲಂಸ್ ಕನ್ನಡದ ನಿರ್ದೇಶಕ ಪ್ರಶಾಂತ್ ಸಾರಥ್ಯದಲ್ಲಿ ಪರ ಭಾಷೆ ನಾಯಕನೊಬ್ಬನನ್ನು ಹಾಕಿಕೊಂಡು ಸಿನಿಮಾ ಮಾಡಲು ಹೊರಟಿರುವ ಬಗ್ಗೆ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. ಕೆಲವರು ಜಗ್ಗೇಶ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇದನ್ನು ನೋಡಿದ ಮೇಲೆ ನಿಮ್ಮ ಮಾತು ಸತ್ಯ ಎನಿಸುತ್ತದೆ ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ‘ಇದನ್ನೇ ನಾನು ಮೊನ್ನೆಯೂ ಹೇಳಲು ಹೊರಟಿದ್ದು. ಕೆಲವು ವರ್ಷಗಳು ಹೋಗಲಿ, ಆಮೇಲೆ ಈಗ ನನ್ನ ಟೀಕಿಸಿದವರೇ ಅಂದು ಜಗ್ಗೇಶ್ ಸರಿಯಾಗಿಯೇ ಹೇಳಿದ್ದರು ಹೇಳ್ತಾರೆ ನೋಡಿ’ ಎಂದಿದ್ದರು. ಕನ್ನಡದ ನಿರ್ಮಾಣ ಸಂಸ್ಥೆಗೆ ಸಿನಿಮಾ ಮಾಡಲು ಕನ್ನಡದ ನಾಯಕರು ಸಿಗಲಿಲ್ಲವೇ ಎಂದು ಹಲವರು ಅಪಸ್ವರವೆತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಪುನೀತ್-ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ಸಿನಿಮಾ?!