Publish Date: Wed, 02 Dec 2020 (10:37 IST)
Updated Date: Wed, 02 Dec 2020 (10:39 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ನಿಜ ಜೀವನದಲ್ಲೂ ಕೂಡ ಕಷ್ಟದಲ್ಲಿರುವವರಿಗೆ ತಮ್ಮ ಸಹಾಯ ಹಸ್ತ ನೀಡುತ್ತಾರೆ.
ಹೌದು. ಅನೇಕ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಮಹೇಶ್ ಬಾಬು ಅವರು ಇದೀಗ ಇತ್ತೀಚೆಗೆ ಆಂಧ್ರಪ್ರದೇಶದ ಡಿಂಪಲ್ ಎಂಬ ಮಗುವಿನ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಹುಡುಗಿಯ ಚಿಕಿತ್ಸೆಗಾಗಿ ಹಣದ ಸಹಾಯ ಮಾಡಿದ್ದಾರೆ. ಈ ವಿಚಾರವನ್ನು ನಮ್ರತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದು, ಎಲ್ಲರೂ ಮಹೇಶ್ ಬಾಬು ಅವರನ್ನು ನಿಜವಾದ ನಟನೆಂದು ಹೊಗಳಿದ್ದಾರೆ.