Publish Date: Mon, 25 Nov 2019 (09:09 IST)
Updated Date: Mon, 25 Nov 2019 (09:11 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಸೂಪರ್ ಹಿಟ್ ಆಗಿವೆ. ಇದೀಗ ಮೂರನೇ ಹಾಡು ಬಿಡುಗಡೆಯಾಗುತ್ತಿದೆ.
ಕಾಣೆಯಾಗಿರುವೆ ನಾನು ಎಂದು ಆರಂಭವಾಗುವ ರೊಮ್ಯಾಂಟಿಕ್ ಹಾಡೊಂದು ಇಂದು ಬೆಳಿಗ್ಗೆ 11 ಗಂಟೆಗೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.
ಈ ಹಾಡಿಗೆ ಸೋನು ನಿಗಂ ಮತ್ತು ಅನುರಾಧ ಭಟ್ ಧ್ವನಿ ನೀಡಿದ್ದಾರೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಹಾಡಿನ ಬಳಗ ನೋಡಿದರೆ ಇದು ಮತ್ತೊಂದು ಮೆಲೊಡಿ ಹಿಟ್ ಸಾಂಗ್ ಆಗುವುದರಲ್ಲಿ ಸಂಶಯವಿಲ್ಲ.