Publish Date: Sun, 24 Nov 2019 (14:25 IST)
Updated Date: Sun, 24 Nov 2019 (14:27 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜೆಪಿ ನಗರದ ಕನ್ ವೆನ್ಷನ್ ಹಾಲ್ ನಲ್ಲಿ ಧ್ರುವ-ಪ್ರೇರಣಾ ವಿವಾಹ ಕಾರ್ಯಕ್ರಮಗಳು ನೆರವೇರಿದೆ. ಈ ಸಂದರ್ಭದಲ್ಲಿ ಕುಟುಂಬಸ್ಥರು, ಸ್ನೇಹಿತರು ಆಗಮಿಸಿ ನೂತನ ವಧೂ ವರರಿಗೆ ಶುಭ ಹಾರೈಸಿದ್ದಾರೆ.
ವರ ಪೂಜೆ, ಗೌರಿ ಪೂಜೆ ಸೇರಿದಂತೆ ಸಂಪ್ರದಾಯದ ಪ್ರಕಾರ ಇವರ ವಿವಾಹ ಕಾರ್ಯಕ್ರಗಳು ನೆರವೇರಿದೆ. ಇಂದು ಸಂಜೆ ಚಿತ್ರರಂಗದ ಗಣ್ಯರಿಗಾಗಿ ರಿಸೆಪ್ಷನ್ ಆಯೋಜಿಸಿರುವ ಸರ್ಜಾ ಕುಟುಂಬ ನಾಳೆ ಅಭಿಮಾನಿಗಳಿಗಾಗಿಯೇ ವಿಶೇಷ ಔತಣಕೂಟ ಏರ್ಪಸಿದ್ದಾರೆ.